ಶಿರಸಿ: ಸನಾತನ ಎಂದರೆ ಯಾವಾಗಲೂ ಇರುವಂತದ್ದು ಎಂದು ಅರ್ಥ. ಸನಾತನ ಧರ್ಮವನ್ನು ನಾಶಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ನುಡಿದರು.
ಗುರುವಾರ ವಾದಿರಾಜ ಮಠದಲ್ಲಿ ಆಯೋಜಿಸಿದ್ದ ಜ್ಞಾನೋತ್ಸವ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕೆಳಗೆ ಬೀಳುತ್ತಿರುವ ವ್ಯಕ್ತಿ ಯನ್ನು ಎತ್ತಿಹಿಡಿವುದೇ ಧರ್ಮ. ಸನಾತನ ಧರ್ಮಕ್ಕೆ ಧರ್ಮಕ್ಕೆ ಉತ್ಪತ್ತಿಯೂ ಇಲ್ಲ. ನಾಶವೂ ಇಲ್ಲ. ಆದ್ದರಿಂದ ಎಲ್ಲದಕ್ಕಿಂತ ಶ್ರೇಷ್ಠ ವಾದ ಧರ್ಮ ಸನಾತನ ಹಿಂದೂ ಧರ್ಮವಾಗಿದೆ ಎಂದರು.
ಭಾರತ ದೇಶದ ಮಣ್ಣು ಅತ್ಯಂತ ಪವಿತ್ರ ವಾದ ಮಣ್ಣು. ಭಗವಂತನ ಅವತಾರಗಳು ಆಗಿದ್ದು ಭರತಭೂಮಿ ಯಲ್ಲಿ ಮಾತ್ರ ಎಂದರು.
ಭವಿಷ್ಯ ಭಾರತಕ್ಕೆ ಸನಾತನ ಧರ್ಮದ ಅವಶ್ಯಕತೆ ಇದೆಯೇ? ಎಂಬ ವಿಚಾರವಾಗಿ ಮಾತನಾಡಿದ ಚಿಂತಕ ರೋಹಿತ್ ಚಕ್ರತೀರ್ಥ ಎಲ್ಲರನ್ನೂ ಸಮಾನವಾಗಿ ಕಾಣುವ ಸಹೋದರರಂತೆ ಬೆಳೆಸುವ ,ಅಗತ್ಯಕಡಿಮೆ ಮಾಡಿ ನೆಮ್ಮದಿ ಸಂತೋಷ ಕೊಡುವುದೇ ಸನಾತನ ಧರ್ಮ.ಸನಾತನ ಧರ್ಮದಿಂದ ಮಾತ್ರ ಜಗತ್ತು ಮುನ್ನೆಡೆಯಲು ಸಾಧ್ಯ.ಭವಿಷ್ಯದ ಭಾರತಕ್ಕೆ ಸನಾತನ ಧರ್ಮವೇ ಉತ್ತರ ಎಂದು ಪ್ರತಿ ಪಾದಿಸಿದರು.