ಸೈದಾಪುರ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ಮಹಾಲಿಂಗಪ್ಪ ಸನದಿ ಅವರನ್ನು ಸನ್ಮಾನಿಸಲಾಯಿತು. ಬಸವಣ್ಣೆಪ್ಪ ಬ್ಯಾಳಿ, ಮಹಾಂತಯ್ಯ ಮಠಪತಿ ಇತರರಿದ್ದರು. 
ಜಿಲ್ಲೆ

ಸೈದಾಪುರ ಗ್ರಾಪಂ ಅಧ್ಯಕ್ಷರಾಗಿ ಸನದಿ ಅವಿರೋಧ ಆಯ್ಕೆ

ಮಹಾಲಿಂಗಪುರ: ಸಮೀಪದ ಸೈದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿಯ ಮಹಾಲಿಂಗಪ್ಪ ಸನದಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಸಿದ್ದಪ್ಪ ಪಟ್ಟಿಹಾಳ ತಿಳಿಸಿದ್ದಾರೆ.

ಪಿಯೂಷ ಓಸ್ವಾಲ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸಾಮಾನ್ಯ ಅಭ್ಯರ್ಥಿ ಮೀಸಲಾತಿಯಡಿ ಮಹಾಲಿಂಗಪ್ಪ ಸನದಿ ಅವರೇ ಒಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅಧ್ಯಕ್ಷರೆಂದು ಘೋಷಿಸಲಾಯಿತು ಎಂದು ತಿಳಿಸಿದರು.

ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ರನ್ನಬೆಳಗಲಿ ಪ.ಪಂ.ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಬಸವಣ್ಣೆಪ್ಪ ಬ್ಯಾಳಿ, ಮಹಾಂತಯ್ಯ ಮಠಪತಿ, ಶಿವಲಿಂಗಪ್ಪ ಕೌಜಲಗಿ, ಮಹಾಲಿಂಗ ಪುರಾಣಿಕ, ಶಿವಪ್ಪ ಬಾಯಪ್ಪಗೋಳ, ಮಲಗೌಡ ಪಾಟೀಲ, ಮುತ್ತು ನಾಯಕ, ರಾಮನಗೌಡ ಪಾಟೀಲ, ಮಲ್ಲಪ್ಪ ಬಾಯಪ್ಪಗೋಳ, ಬಸಪ್ಪ ಉಳ್ಳಾಗಡ್ಡಿ, ಲಕ್ಷ್ಮಣ ಉಳ್ಳಾಗಡ್ಡಿ, ನಿತಿನ್ ಒಡೆಯರ್, ರವಿ ಕುರುಬರ, ಸದಾ ರಜಪೂತ, ಮುಕುಂದ ಪವಾರ, ವಿಶಾಲ ತೆಗ್ಗಳ್ಳಿ, ಬಸವಣ್ಯೆಪ್ಪ ಮಾಂಗ, ಯಂಕಪ್ಪ ಕೇದಾರಿ, ಗ್ರಾ.ಪಂ.ಸದಸ್ಯರಾದ ಶಿವಲಿಂಗ ಪೋಳ, ಚಿನ್ನಪ್ಪ ಬಾಯಪ್ಪಗೋಳ, ಮಲ್ಲಪ್ಪ ಕೌಜಲಗಿ, ಯಮನಪ್ಪ ಉಪ್ಪಾರ, ಆನಂದ ಬನಹಟ್ಟಿ, ಶೈಲಾ ಕೌಜಲಗಿ, ತುಳಸವ್ವ ಲಮಾಣಿ, ಮಾಯವ್ವ ಮುರಚೆಟ್ಟಿ, ಕವಿತಾ ಕಾಂಬಳೆ, ರೂಪಾಲಿ ಶಿಂಧೆ, ಪಿಡಿಒ ಚಿನ್ನಪ್ಪ ಹಿರೆಕುರುಬರ ಇತರರಿದ್ದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ ಚುನಾವಣಾಧಿಕಾರಿಯಾಗಿ, ಕೆಸರಗೊಪ್ಪ ಗ್ರಾಪಂ ಕಾರ್ಯದರ್ಶಿ ಭಾಸ್ಕರ ಬಡಿಗೇರ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.