ಜಿಲ್ಲೆ

ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ, ಆ. 31ರಂದು ಎಂಟ್ರನ್ಸ್ ಟೆಸ್ಟ್

Dharwada - Basavaraj Idli

ಹುಬ್ಬಳ್ಳಿ: ಸಾಮಾಜಿಕ ಸೇವಾ ಸಂಟನೆ ಸಮುತ್ಕರ್ಷ ಟ್ರಸ್ಟ ವತಿಯಿಂದ ಐಎಎಸ್, ಐಪಿಎಸ್ ನಂತಹ ನಾಗರಿಕ ಸೇವೆಗೆ ಹೊಸ ಪೀಳಿಗೆಯ ಅಧಿಕಾರಿಗಳನ್ನು ಭಾರತೀಯ ತತ್ವಗಳತ್ತ ಈಗಿನಿಂದಲೇ ಉತ್ತೇಜಿಸುವುದು ಹಾಗೂ ಯುಪಿಎಸ್ಸಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಲು ಶುದ್ಧ ಭಾರತೀಯ ಮೌಲ್ಯ ಹಾಗೂ ಶಿಕ್ಷಣ ಪದ್ಧತಿಯ ಆಧಾರದ ತರಬೇತಿ ನೀಡುತ್ತ ಬರಲಾಗಿದೆ.

ಇದೀಗ ಹುಬ್ಬಳ್ಳಿಯಲ್ಲಿ ಸಮುತ್ಕರ್ಷ ಐಎಎಸ್ ಅಕಾಡೆಮಿಯು ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿರುವ ವಿದ್ಯಾರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲು ಆ. 31 ಬೆಳಗ್ಗೆ 11ಕ್ಕೆ ಪ್ರವೇಶ ಪರೀಕ್ಷೆ ಏರ್ಪಡಿಸಿದೆ.

ಹುಬ್ಬಳ್ಳಿ ವಿದ್ಯಾನಗರ ಬಿವಿಬಿ ಆವರಣದ ಸಮುತ್ಕರ್ಷ ಕೇಂದ್ರ ಕಚೇರಿಯಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ಹಾಜರಾಗುವ ಮೂಲಕ ಕೋರ್ಸ್ ಗೆ ಪ್ರವೇಶ ಪಡೆಯಬಹುದು ಎಂದು ಟ್ರಸ್ಟ್ ಡೈರೆಕ್ಟರ್ ಜನರಲ್ ಅನ್ನಪೂರ್ಣ ಹಂಪಿಹೊಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.