ಜಿಲ್ಲೆ

ಸಾಮೂಹಿಕ ಗಣಪತಿ ನಮಸ್ಕಾರ

Dharwada - Basavaraj Idli

ಹುಬ್ಬಳ್ಳಿ: ಎಸ್ಪಿವೈಎಸ್ಎಸ್ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಯೋಗಸ್ಪರ್ಶ ಪ್ರತಿಷ್ಠಾನ ವತಿಯಿಂದ ಶ್ರೀ ಗಣೇಶ ಚತುರ್ಥಿ ಸಂದರ್ಭದಲ್ಲಿ ನಗರದ ಚನ್ನಮ್ಮ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗುವ ಸಾರ್ವಜನಿಕ ಗಣಪತಿ ಮಂಟಪದಲ್ಲಿ ಸಾಮೂಹಿಕ ಗಣಪತಿ ನಮಸ್ಕಾರ ಸಲ್ಲಿಕೆ ಹಾಗೂ ಭಜನೆ ಹಮ್ಮಿಕೊಳ್ಳಲಾಗಿದೆ.

ಸೆ. 8 ಹಾಗೂ 9ರಂದು ಎರಡು ದಿನ ಬೆಳಗ್ಗೆ 6.30ಕ್ಕೆ ಗಣಪತಿ ನಮಸ್ಕಾರ ಸಲ್ಲಿಕೆ ಕಾರ್ಯಕ್ರಮ ನಡೆಯಲಿದೆ.

ನಗರದ ಯೋಗ ಬಂಧುಗಳು, ಸಾರ್ವಜನಿಕರು ಬಂಧು ಮಿತ್ರರೊಂದಿಗೆ ಭಾಗವಹಿಸಬೇಕೆಂದು ಯೋಗಸ್ಪರ್ಶ ಪ್ರತಿಷ್ಠಾನದ ದಯಾನಂದ ಮಗಜಿಕೊಂಡಿ ಅವರು ಕೋರಿದ್ದಾರೆ.