ಉಡುಪಿ: ವ್ಯಕ್ತಿಗೆ ಒಡವೆಗಳು ಹೇಗೆ ಭೂಷಣವೋ ಹಾಗೆಯೇ ಸಮಾಜಕ್ಕೆ ಸಂಸತಿ, ಸಂಸ್ಕಾರಗಳು ಭೂಷಣ. ಕರಾವಳಿ ಪ್ರದೇಶ ಅತ್ಯುನ್ನತ ಸಂಸತಿ, ಸಂಸ್ಕಾರಕ್ಕೆ ಹೆಸರುವಾಸಿಯಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಶನಿವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆ, ಯಕ್ಷಗಾನ ಅಕಾಡೆಮಿ, ಜಾನಪದ ಅಕಾಡೆಮಿ, ನಾಟಕ ಅಕಾಡೆಮಿ ಹಾಗೂ ರಂಗಭೂಮಿ ಉಡುಪಿ ಸಹಯೋಗದಲ್ಲಿ ಗೊಂಬೆಯಾಟ, ಜಾನಪದ ಕಲೆ, ಸಂಗೀತ, ನಾಟಕಗಳು ಮೇಳೈಸಿದ ಎರಡು ದಿನಗಳ ಸಂಸತಿ ಸಂಭ್ರಮ ಕಾರ್ಯಕ್ರಮ ಸಮಾರೋಪದಲ್ಲಿ ಮಾತನಾಡಿದರು.
ಕೇರಳ, ಹೈದರಾಬಾದ್, ಬಾಂಬೆ ಕರ್ನಾಟಕ, ಬಯಲು ಸೀಮೆಗೆ ಹೋಲಿಸಿದರೆ ಕರಾವಳಿ ಸಂಸ್ಕೃತಿ ಬಹಳ ವಿಭಿನ್ನವಾಗಿದೆ. ಕು.ಶಿ, ಹರಿದಾಸ್ ಭಟ್, ಡಾ.ಶಿವರಾಮ ಕಾರಂತ ಮೊದಲಾದವರು ನಮ್ಮ ಕರಾವಳಿಯ ಸಂಸತಿ ಸೊಗಡನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ ಎಂದರು.
ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ. ಬೀ. ವಿಜಯ ಬಲ್ಲಾಳ್ ಮಾತನಾಡಿ, ಕೃತಕ ಬುದ್ದಿಮತ್ತೆ ಬಳಕೆ ವಿವಿಧ ರಂಗದಲ್ಲಿ ಹೆಚ್ಚಾಗುತ್ತಿದೆ. ಸಿನೆಮಾ, ಟೀಚಿಂಗ್ ಅಲ್ಲದೆ ಮನೆ ಕೆಲಸದಲ್ಲೂ ಈ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಮಾನವ ಹಣದಾಸೆಗೆ ಬಲಿ ಬೀಳಬಾರದು. ಹೀಗಾದರೆ ನಮ್ಮ ಬಾಳಿನಲ್ಲಿ ನೆಮ್ಮದಿ, ಸಂತೋಷ ಮರೀಚಿಕೆಯಾಗಬಹುದು. ರಂಗಭೂಮಿ ಇಂದು ರಂಗಶಿಕ್ಷಣವನ್ನು ಶಾಲಾ ಕಾಲೇಜುಗಳಲ್ಲಿ ಪ್ರಾರಂಭಿಸಿರುವುದು ಶ್ಲಾನೀಯ ಎಂದರು.
ಕನ್ನಡ ಮತ್ತು ಸಂಸತಿ ಇಲಾಖೆಯ ಉಪ ನಿರ್ದೇಶಕಿ ಪೂರ್ಣೀಮಾ ಮಾತನಾಡಿ, ಉಡುಪಿಯಲ್ಲಿ ಸಾಹಿತಿಗಳು, ಕಲಾವಿದರಿಗೆ ಕೊರತೆಯಿಲ್ಲ. ಈ ಕಾರಣದಿಂದಲೇ ಜಿಲ್ಲೆ ಇಂದು ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸತಿವಾಗಿ ಮುಂದುವರಿದಿದೆ ಎಂದರು.
ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಉದ್ಯಮಿ ಗೋಪಾಲ ಸಿ. ಬಂಗೇರ, ರಂಗಭೂಮಿ ಉಡುಪಿ ಸಂಸ್ಥೆಯ ಉಪಾಧ್ಯಕ್ಷ ಎನ್. ಆರ್. ಬಲ್ಲಾಳ್ ಉಪಸ್ಥಿತರಿದ್ದರು. ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ನಮ್ರತಾ ಎನ್. ಸ್ವಾಗತಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ರವಿರಾಜ್ ನಾಯಕ್ ನಿರೂಪಿಸಿದರು. ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದಿಪಚಂದ್ರ ಕುತ್ಪಾಡಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ರಂಗಭೂಮಿ ಉಡುಪಿ ವತಿಯಿಂದ ಪ್ರದಿಪ್ ಚಂದ್ರ ಕುತ್ಪಾಡಿ ನಿರ್ದೇಶನದ ಸುಪ್ರಸಿದ್ಧ ನಾಟಕ 'ಕಾಲಚಕ್ರ ' ಪ್ರದರ್ಶನಗೊಂಡಿತು.