ಜಿಲ್ಲೆ

ಸಂಸ್ಕೃತ ಭಾಷಾ ಕಾರ್ಯಾಗಾರ

Mangaluru - Hariprasad Rai

ಮಂಗಳೂರು : ದ.ಕ.ಜಿಲ್ಲಾ ಪ.ಪೂ.ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘ ಮತ್ತು ಪ್ರಾಂಶುಪಾಲರ ಸಂಘದ ವತಿಯಿಂದ
ನಗರದ ಸಂತ ಅಲೋಶಿಯಸ್ ಪ.ಪೂ.ಕಾಲೇಜು ಸಭಾಂಗಣದಲ್ಲಿ ಸಂಸ್ಕೃತ ಭಾಷಾ ಕಾರ್ಯಾಗಾರ ನಡೆಯಿತು.
ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಕಾರ್ಯಾಗಾರ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿದ್ದ ದ.ಕ.ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಡಿ.ಜಯಣ್ಣ ಮಾತನಾಡಿ ‘ಉತ್ತಮ ಫಲಿತಾಂಶ ಪಡೆಯುವಲ್ಲಿ ಸಂಸ್ಕೃತ ಉಪನ್ಯಾಸಕರ ಪಾತ್ರ ಮಹತ್ತರವಾದದ್ದು. ಅಮೆರಿಕದಂತಹ ದೇಶಗಳಲ್ಲಿ ಸಂಸ್ಕೃತದ
ವರ್ಧನೆಯಾಗುವಾಗ ನಮ್ಮದೇ ಭೂಮಿಯಲ್ಲಿ ಸಂಸ್ಕೃತ ಅಭ್ಯಸಿಸುವವರ ಸಂಖ್ಯೆ ಹೆಚ್ಚಬೇಕು ಎಂದರು.
ದ.ಕ.ಜಿಲ್ಲಾ ಪ.ಪೂ.ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಗಂಗಾಧರ ಆಳ್ವ, ಸಂಸ್ಕೃತ ಉಪನ್ಯಾಸಕರ ಸಂಘದ ಅಧ್ಯಕ್ಷ
ರಮೇೀಶ ಆಚಾರ್ಯ, ಕಾರ್ಯದರ್ಶಿ ಡಾ.ಮಧುಕೇಶ್ವರ ಶಾಸ್ತ್ರಿ, ಅಲೋಶಿಯಸ ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಡಾ.ಸುರೇಖಾ ಉಪಸ್ಥಿತರಿದ್ದರು. ಶ್ರೀನಿವಾಸ ಮಧ್ಯಸ್ಥ ಕಾರ್ಯಕ್ರಮ ನಿರೂಪಿಸಿದರು.