ವಿಜಯವಾಣಿ ಸುದ್ದಿಜಾಲ ಗದಗ
ವಿಜ್ಞಾನ ಲೋಕವನ್ನು ಸೆಳೆದ ಸಂಸ್ಕೃತ ಭಾಷೆಯಲ್ಲೇ ವಿಜ್ಞಾನದ ಎಲ್ಲ ಸೂತ್ರಗಳು ಇವೆ ಎಂದು ಇಸ್ರೋ ಮತ್ತು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಅಂತಹ ಶ್ರೇಷ್ಠವಾದ ಭಾಷೆಯೇ ಸಂಸ್ಕೃತ ಎಂದು ಹೇಮರಾಜ ಶಾಸ್ತ್ರಿಗಳು ಹೆಡಿಗೊಂಡ ಹೇಳಿದರು.
ನಗರದ ಪಂಚಾಚಾರ್ಯ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಸಂಸ್ಕೃತ ದಿನಾಚರಣೆ ಹಾಗೂ ಜಿಲ್ಲಾ ಸಂಸತ ಶ್ರಾವಣಿ ಕಾರ್ಯಕ್ರಮದ ಉದ್ಘಾಟಣೆ ನೆರವೇರಿಸಿ ಮಾತನಾಡಿದ ಅವರು ಸಂಸ್ಕೃತ ಭಾಷೆಯು ಎಲ್ಲ ಭಾಷೆಗಳ ಮೂಲ. ಅಂತಹ ದೇವಭಾಷೆಯನ್ನು ನಾವು ನಿವೇಲ್ಲರೂ ಉಳಿಸಿ ಬೆಳಸಿ ಅಧ್ಯಯನ ಮಾಡಬೇಕು ಎಂದರು.
ವಿದ್ವಾನ್ ಜಿ.ಎಸ್. ಗಾಂವಕರ ಮಾತನಾಡಿ, ಈ ಸಂಸ್ಕೃತ ಶ್ರಾವಣಿ ಕಾರ್ಯಕ್ರಮವು ಒಂದು ತಿಂಗಳುಗಳ ಕಾಲ ನೆರವೇರಲಿದೆ. ಮಕ್ಕಳಿಗೆ ಶ್ರೀಮದ್ಭಗವದ್ಗೀತಾ ಶ್ಲೋಕ, ಅಮರಕೋಶ, ಸುಭಾಷಿತ, ನೀತಿ ಪಾಠಗಳನ್ನು, ಸಂಸತ ಸಂಭಾಷಣಾಗಳನ್ನು ತಿಳಿ ಹೇಳಲಾಗುವುದು ಎಂದರು.
ವಿಶ್ವ ಸಂಸ್ಕೃತ ದಿನಾಚರಣೆ ಅಂಗವಾಗಿ ಸಂಸತ ಪಾಠಶಾಲೆಯಿಂದ ವಿದ್ಯಾಥಿರ್ಗಳು ನಗರದ ಪ್ರಮುಖ ರಸ್ತೆಯಲ್ಲಿ ವೇದ ವಾಖ್ಯಗಳನ್ನು, ಹಿಡಿದು ಜಾಗೃತಿ ಮೂಡಿಸಿದರು.
ಎಸ್.ಎಸ್. ನೀಲಗುಂದ, ಪಂಚಯ್ಯ ಹಿರೇಮಠ, ಎಸ್.ಎಸ್. ಬಣಕಾರ, ವಿ. ಸಿ. ಪಟ್ಟಣಶೆಟ್ಟಿ, ಸುರೇಶ ಮಾದರ, ಮಹಾಂತೇಶ ಮಾದರ, ತೇಜಶ್ವಿನಿ ಕುರ್ತಕೋಟಿ, ಕಳಕಪ್ಪ ಕುರ್ತಕೋಟಿ ಹಲವರು ಇದ್ದರು.