ಜಿಲ್ಲೆ

ಸಂಶಿ ಅರ್ಬನ್ ಕ್ರೆಡಿಟ್ ಸೊಸೈಟಿ ಬೆಳ್ಳಿ ಮಹೋತ್ಸವ

Dharwada - Basavaraj Idli

ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಸಂಶಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ಬೆಳ್ಳಿ ಮಹೋತ್ಸವ ಅಂಗವಾಗಿ ಕಿರು ಸಾಲ ವಿತರಣೆ ಸಮಾರಂಭ ಶನಿವಾರ ನಡೆಯಿತು.

ಗ್ರಾಹಕರು ಹಾಗೂ ಸಣ್ಣ ವ್ಯಾಪಾರಸ್ಥರಿಗೆ ಅನುಕೂಲವಾಗುವ ಕಿರು ಸಾಲ (ಬಜಾರ್ ಲೋನ್) ಯೋಜನೆಯಡಿ ಸಂತೆಗಳಲ್ಲಿ ವ್ಯಾಪಾರ ಮಾಡುವವರಿಗೆ ಸಾಲ ನೀಡಲಾಯಿತು.

ಕ್ಯಾಶ್ ಕ್ರೆಡಿಟ್ ಸಾಲ ಯೋಜನೆ ಮೂಲಕ ಕಿರಾಣಿ ಅಂಗಡಿ, ಹೋಟೆಲ್, ಗ್ಯಾರೇಜ್ ಮುಂತಾದ ಉದ್ಯೋಗ ಮಾಡುವವರಿಗೆ ಜಾರಿಗೆ ತರಲಾಗಿದೆ. ಈ ಸಾಲಗಳು ಸುಲಭ ಹಾಗೂ ಸರಳವಾಗಿ ಸಿಗುವ ವ್ಯವಸ್ಥೆ ಮಾಡಲಾಗಿದೆ.

ಸೊಸೈಟಿ ಅಧ್ಯಕ್ಷ ವಿ.ಡಿ. ಅಕ್ಕಿ, ಹೊಸ ಸಾಲ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಉಪಾಧ್ಯಕ್ಷ ಎ.ಬಿ. ಉಪ್ಪಿನ, ನಿರ್ದೇಶಕರಾದ ಎಸ್.ಸಿ. ಹತ್ತಿ, ಐ.ಎಂ. ಕೋರಿ, ಎಂ.ಆರ್. ಯಲ್ಲರಡ್ಡಿ, ಜಿ.ಬಿ. ಸೊರಟೂರ, ಎಂ.ಎನ್. ಪಡತೇರ, ಪ್ರಧಾನ ವ್ಯವಸ್ಥಾಪಕ ಎಸ್.ಎ್. ಹತ್ತಿ, ಸದಸ್ಯರು ಉಪಸ್ಥಿತರಿದ್ದರು.