ದೇವದುರ್ಗದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಧ್ವಜಾರೋಹಣ ಮಾಡಿದರು.  
ಜಿಲ್ಲೆ

ಸಮೃದ್ಧ ರಾಜ್ಯವಾಗಿದೆ ಕರ್ನಾಟಕ - ತಾಪಂ ಇಒ ರಾಮರೆಡ್ಡಿ ಪಾಟೀಲ್

ಶಶಿಧರ ಎಲ್

ದೇವದುರ್ಗ: ಕರ್ನಾಟಕ ಏಕೀಕರಣವಾಗಿ 68ವರ್ಷಗಳಾಗಿದ್ದು, ನಾಡು, ನುಡಿಯ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದೆ ಎಂದು ತಾಪಂ ಇಒ ರಾಮರೆಡ್ಡಿ ಪಾಟೀಲ್ ಹೇಳಿದರು.

ತಾಪಂ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಬುಧವಾರ ಮಾತನಾಡಿದರು. 1973 ನವೆಂಬರ್ 1ರಂದು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಕಳೆದ 50 ವರ್ಷಗಳಲ್ಲಿ ಕರ್ನಾಟಕ ಸಮೃದ್ಧ ರಾಜ್ಯವಾಗಿದೆ ಎಂದರು.

ಸಹಾಯಕ ನಿರ್ದೇಶಕ ಅಣ್ಣರಾವ್ ಮಾತನಾಡಿ, ಕನ್ನಡ ಭಾಷಿಕರು ಮುಂಬೈ ಪ್ರಾಂತ, ಹೈದರಾಬಾದ್ ಕರ್ನಾಟಕ ಹಾಗೂ ಮದ್ರಾಸ್ ಪ್ರಾಂತದಲ್ಲಿ ವಾಸಿಸುತ್ತಿದ್ದರು. ಹೋರಾಟದ ಫಲವಾಗಿ ರಾಜ್ಯದ ಏಕೀಕರಣವಾಯಿತು ಎಂದರು. ಅಕ್ಷರ ದಾಸೋಹ ಅಧಿಕಾರಿ ಬಂದೋಲಿ ಸಾಬ್, ತಾಪಂ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಹನುಮಂತ ಇದ್ದರು.