ದೇವಸ್ಥಾನದ ಧಾರ್ಮಿಕ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವ ಗಣ್ಯರು. 
ಜಿಲ್ಲೆ

ಬಸವೇಶ್ವರ ದೇವಸ್ಥಾನದಲ್ಲಿ ಸಂಪ್ರೋಕ್ಷಣ ಕಾರ್ಯಕ್ರಮ

ನಾಗೇಶ ಎಸ್

ಹಲಗೂರು: ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಸಂಪ್ರೋಕ್ಷಣ ಕಾರ್ಯಕ್ರಮ ನೆರವೇರಿತು.

ಗೋಧೂಳಿ ಲಗ್ನದಲ್ಲಿ ಗಂಗಾಪೂಜೆ, ಗೋಪೂಜೆ ಮುಖಾಂತರ ಕೃಷ್ಣ, ರುಕ್ಮಿಣಿ ದೇವಸ್ಥಾನದಿಂದ ಪೂರ್ಣಕುಂಭದೊಂದಿಗೆ ಮುತ್ತೈದೆಯರ ಜತೆ ವೀರಗಾಸೆ, ತಮಟೆ, ನಗಾರಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಲಾಯಿತು. ದೇವಾಲಯ ಪ್ರವೇಶಿಸಿ ಪುಣ್ಯ ಪಂಚ ಗವ್ಯ, ಪಂಚ ಕಳಶ, ನವಗ್ರಹ, ಅಷ್ಟದಿಕ್ಪಾಲಕ, ವಾಸ್ತು ಪೂಜೆ, ಉಮಾ ಮಹೇಶ್ವರ ಪೂಜೆ, ಮಂಡಲರಾಧನೆ, ಮೃತ್ಯುಂಜಯ ಪೂಜೆ, ಶಿವ ಪರಿವಾರ ಪೂಜೆ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗವನ್ನು ಪುರಿಗಾಲಿ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಿಸಲಾಯಿತು.

ಪೂಜೆ ಪುನಸ್ಕಾರಗಳು ಮುಗಿದ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಹಕರಿಸಿದ ದಾನಿಗಳನ್ನು ಅಭಿನಂದಿಸಲಾಯಿತು. ರಾಮಲಿಂಗೇಶ್ವರ ಮಠ ಯಡವಾಣಿ ಅಮೃತೂರು ಬಸವಾನಂದ ಸ್ವಾಮೀಜಿ, ಆದಿ ಚುಂಚನಗಿರಿ ಶಾಖಾ ಮಠದ ರಾಮನಗರ ಶ್ರೀ ಅನ್ನದಾನ ಸ್ವಾಮೀಜಿ, ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ದಳವಾಯಿ ಕೋಡಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರ್ವತಿ, ಗ್ರಾಮಸ್ಥರಾದ ಶಿವ ಕೆಂಚೇಗೌಡ, ಕುಮಾರ್, ಪ್ರಧಾನ ಅರ್ಚಕ ಶಿವಸ್ವಾಮಿ, ಬಸವಲಿಂಗ, ಗೂಳಿಗೌಡ, ಸಿದ್ದಲಿಂಗಸ್ವಾಮಿ, ಶಿವಸ್ವಾಮಿ, ಶಿವರಾಜು ಇದ್ದರು.