ಜಿಲ್ಲೆ

ಸಂಪ್ರತಿಷ್ಠಾನದ ತ್ರಿಂಶೀಯ ವಾರ್ಷಿಕೋತ್ಸವ, ನೂತನ ಗ್ರಂಥ ಅನಾವರಣ - ಪ್ರಶಸ್ತಿ ಪ್ರದಾನ ಹಾಗೂ ಸಂಸ್ಕೃತ ಪ್ರತಿಭಾ ಪುರಸ್ಕಾರ

Mangaluru - Nishantha Narayana

ಪುತ್ತೂರು: ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದ ತ್ರಿಂಶೀಯ ವಾರ್ಷಿಕೋತ್ಸವ, ನೂತನ ಗ್ರಂಥ ಅನಾವರಣ - ಪ್ರಶಸ್ತಿ ಪ್ರದಾನ ಹಾಗೂ ಸಂಸ್ಕೃತ ಪ್ರತಿಭಾ ಪುರಸ್ಕಾರ ಸೆ.೧೦ ಬೆಳಗ್ಗೆ ೯.೩೦ರಿಂದ ಪೂಳ್ಯ ಶ್ರೀನಿವಾಸ ಸಭಾಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ವಹಿಸಲಿದ್ದು, ಸಂಸ್ಕೃತ ವಿದ್ವಾಂಸ ಬಿ.ಎಲ್. ನಾಗರಾಜ ಭಾಗವಹಿಸಲಿದ್ದಾರೆ.

ಹಿರಿಯ ವೈದಿಕ ಕೃಷ್ಣ ಭಟ್ಟ ಪೆಲತ್ತಡ್ಕ ಅವರಿಗೆ ಬ್ರಹ್ಮಶ್ರೀ ಮಿತ್ತೂರು ಪುರೋಹಿತಾ ಕೃಷ್ಣ ಭಟ್ಟ ಸಂಸ್ಮರಣ ವೈದಿಕ ವಿದ್ವತ್ ಪ್ರಶಸ್ತಿ, ಹಿರಿಯ ಜ್ಯೋತಿಷ್ಯ ಡಿ. ವೆಂಕಟ್ರಮಣ ಭಟ್ಟ ಮಾಡಾವು ಅವರಿಗೆ ಸಂಪ್ರತಿಷ್ಠಾನದ ಶಾಸ್ತ್ರ ವಿದ್ವತ್ ಪ್ರಶಸ್ತಿ, ನಿಘಂಟು ರಚನೆಗಾಗಿ ವಿ ಕೃಷ್ಣ ಬೆಂಗಳೂರು ಅವರಿಗೆ ಪ್ರೊ. ಎಂ. ಮರಿಯಪ್ಪ ಭಟ್ಟ ಪ್ರಶಸ್ತಿ, ಮೂಲಿಕಾತಜ್ಞ ಕಾನತ್ತೂರು ಗೋವಿಂದ ಭಟ್ಟ ಕೂಡ್ಲು ಅವರಿಗೆ ಉಗ್ಗಪ್ಪಕೋಡಿ ವೈದ್ಯ ಪಂ. ಈಶ್ವರ ಭಟ್ಟ ವೈದ್ಯಪ್ರಶಸ್ತಿ, ಯುವ ವಯೋಲಿನ್ ಕಲಾವಿದೆ ಶ್ರೀಲಕ್ಷ್ಮೀ ಚೆನ್ನೈ ಅವರಿಗೆ ಎಚ್. ಎಂ. ಸಂಗೀತ ಕಲಾಪ್ರತಿಭಾ ಪುರಸ್ಕಾರ ನಡೆಯಲಿದೆ.

ಬೆಂಗಳೂರು ನಾರಾಯಣ ಶಾನುಭಾಗ್ ಸಂಪಾದಕತ್ವದ ಧರ್ಮಕುತೂಹಲ ನೂತನ ಗ್ರಂಥ ಅನಾವರಣ ನಡೆಯಲಿದೆ. ಸಂಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಭಟ್ ಬಿ ಉಪಸ್ಥಿತರಿರಲಿದ್ದಾರೆ.