ಕ್ರೀಡಾಕೂಟದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಹೆಬ್ರಿ ಪಿಆರ್‌ಎನ್ ಅಮೃತಭಾರತಿ ವಿದ್ಯಾಲಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿನಿ ಸಮೀಕ್ಷಾರನ್ನು ಅಭಿನಂದಿಸಲಾಯಿತು.  
ಜಿಲ್ಲೆ

ಓಟದಲ್ಲಿ ಸಮೀಕ್ಷಾ ಜಿಲ್ಲಾಮಟ್ಟಕ್ಕೆ

ಹೆಬ್ರಿ: ಶಿಕ್ಷಣ ಇಲಾಖೆ ಮತ್ತು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆಶ್ರಯದಲ್ಲಿ ಶಿರ್ಲಾಲಿನಲ್ಲಿ ಆಯೋಜಿಸಿದ್ದ ತಾಲೂಕುಮಟ್ಟದ ಕ್ರೀಡಾಕೂಟದ 200 ಮೀಟರ್ ಓಟದಲ್ಲಿ ಹೆಬ್ರಿ ಪಿಆರ್‌ಎನ್ ಅಮೃತಭಾರತಿ ವಿದ್ಯಾಲಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿನಿ ಸಮೀಕ್ಷಾ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿ ಹಾಗೂ ತರಬೇತುದಾರ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಹೆಗ್ಡೆ ಇವರನ್ನು ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕಿ ಶಕುಂತಳಾ ಅಭಿನಂದಿಸಿದ್ದಾರೆ.