ಜಿಲ್ಲೆ

Sameer Acharya: ಸಮೀರ್ ಆಚಾರ್ಯ ದಂಪತಿ ಗಲಾಟೆ…ಪೊಲೀಸ್​​ ಠಾಣೆಯಲ್ಲಿ ಬಯಲಾಯ್ತು ಅಸಲಿ ವಿಷ್ಯ

ಬೆಂಗಳೂರು:  ಮಾಜಿ ಬಿಗ್ ಬಾಸ್  ಸ್ಪರ್ಧಿಯಾಗಿದ್ದ ಸಮೀರ್ ಆಚಾರ್ಯ ( Sameer Acharya ) ದಂಪತಿ ದಾಂಪತ್ಯದಲ್ಲಿ ಕಲಹ ಉಂಟಾಗಿದೆ. ಈ ಜೋಡಿ ಹೊಡೆದಾಡಿಕೊಂಡು ಠಾಣೆ ಮೆಟ್ಟಿಲೇರಿದ ಪ್ರಸಂಗವೂ ನಡೆದಿದೆ.

ನಡೆದಿದ್ದೇನು?: 

ಮಾಹಿತಿ ಪ್ರಕಾರ ಸಮೀರ್ ಆಚಾರ್ಯ ಅವರ ಮಗಳನ್ನು ಶ್ರಾವಣಿ ಬೆದರಿಸಿದ್ದ ಕಾರಣಕ್ಕೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಮನೆಯಲ್ಲಿ ಆರಂಭವಾಗಿದ್ದ ಈ ಜಗಳ ವಿಕೋಪಕ್ಕೆ ತಿರುಗಿದೆ. ಸಮೀರ್ ಅವರು ಅತ್ತೆ, ಮಾವ ಸೇರಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಶ್ರಾವಣಿ ಅವರು ಇನ್​​​ಸ್ಟಾಗ್ರಾಮ್​ನಲ್ಲಿ ಲೈವ್ ಮಾಡಲು ಹೋಗಿದ್ದಾರೆ. ಲೈವ್ ವಿಡಿಯೋ ಮಾಡುವಾಗ ಸಮೀರ್ ಆಚಾರ್ಯ ಅವರು ಪತ್ನಿ ಶ್ರಾವಣಿ ಅವರ ಫೋನ್ ಒಡೆದು ಹಾಕಿ, ಕೈ – ಮುಖಕ್ಕೆ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಈ ಗಲಾಟೆಯಲ್ಲಿ ಸಮೀರ್ ತಂದೆ ರಾಘವೇಂದ್ರ ಅವರ ತಲೆಗೂ ಗಾಯಗಳಾಗಿದೆ.

ಸಮೀರ್ ಆಚಾರ್ಯ ಕುಟುಂಬದ ವಿರುದ್ಧ ಶ್ರಾವಣಿ ಅವರು ನ್ಯಾಯಕ್ಕಾಗಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದರು. ಆಗ ಸೊಸೆ ವಿರುದ್ಧ ದೂರು ನೀಡಲು ಸಮೀರ್ ಅವರ ಫೋಷಕರು ಮುಂದಾಗಿದ್ದಾರೆ.

ಮಹಿಳಾ ಠಾಣೆ ಅಧಿಕಾರಿಗಳು ಕೌನ್ಸ್‌ಲಿಂಗ್ ಮೂಲಕ ದಂಪತಿಯನ್ನ ಒಂದು ಮಾಡಿದ್ದಾರೆ. ಕೊಟ್ಟ ಕಂಪ್ಲೇಂಟ್‌ ವಾಪಸ್ ಪಡೆದು ಮತ್ತೊಮ್ಮೆ ಹೀಗೆ ಮಾಡದಂತೆ ಅರ್ಜಿ ಬರೆದುಕೊಟ್ಟು ವಾಪಸ್ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.