ಇಟಗಿ: ಸಮೀಪದ ಪಾರಿಶ್ವಾಡ ಗ್ರಾಮದ ಬಿ.ವಿ.ಸಂಬರಗಿ ಪ್ರೌಢಶಾಲೆ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅನ್ನಪೂರ್ಣಾ ಹಿರೇಮಠ ಶೇ.94.40 ಪ್ರಥಮ, ದೀಪಾ ಜೋಗಪ್ಪಗೋಳ 93.28 ದ್ವೀತಿಯ ಹಾಗೂ ಭೂಮಿಕಾ ಮರಕಟ್ಟಿ ಶೇ.92.80 ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕರು ಹರ್ಷ ವ್ಯಕ್ತಪಡಿಸಿದ್ದಾರೆ.