ಜಿಲ್ಲೆ

ನಿಮ್ಮ ಪ್ರತಿಭೆ - ನಮ್ಮ ವೇದಿಕೆ ಕಾರ್ಯಕ್ರಮ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕನ್ನಡ ಕೇವಲ ಭಾಷೆಯಾಗಿರದೇ ಪ್ರತೀಯೋರ್ವ ಕನ್ನಡಿಗನ ಉಸಿರು ಮತ್ತು ಬದುಕಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಜಾನಪದ ಪರಿಷತ್ ಖಜಾಂಚಿ ಎಸ್.ಎಸ್. ಸಂಪತ್ ಕುಮಾರ್ ಹೇಳಿದರು. ನಗರದ ಓಂಕಾರ ಸದನದಲ್ಲಿ ಭಾನುವಾರ ನಡೆದ ಸಮರ್ಥ ಕನ್ನಡಿಗರು ಸಂಸ್ಥೆಯ ನಿಮ್ಮ ಪ್ರತಿಭೆ - ನಮ್ಮ ವೇದಿಕೆಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡ ಭಾಷಿಕರನ್ನು ಒಗ್ಗೂಡಿಸಿ 68 ವರ್ಷಗಳ ಮೊದಲು ಕರ್ನಾಟಕ ರಾಜ್ಯವನ್ನಾಗಿ ರೂಪಿಸಿದ ಪರಿಣಾಮವೇ ಕನ್ನಡಿಗರು ಒಟ್ಟಾಗಿ ಕನ್ನಡದ ಕಂಪನ್ನು ಪಸರಿಸಲು ಸಾಧ್ಯವಾಗಿದೆ. ಕನ್ನಡ ಎಂದರೆ ಪ್ರೀತಿ, ಸ್ನೇಹ, ಸಹನಾ ಗುಣದ ಪ್ರತೀಕವಾಗಿದ್ದು, ಕನ್ನಡ ಮಾತನಾಡುವುದೇ ಪದ ಕಟ್ಟಿದಂತೆ. ಕನ್ನಡಪರ ಕಾರ್ಯಕ್ರಮಗಳು ನವಂಬರ್‌ಗೆ ಮಾತ್ರ ಸೀಮಿತವಾಗದೇ ವರ್ಷಪೂರ್ತಿ ಬೇರೆ ಬೇರೆ ಸಂಸ್ಥೆಗಳಿAದ ಆಯೋಜಿತವಾಗಬೇಕು. ಪ್ರತೀ ದಿನವೂ ಎಲ್ಲೆಡೆ ಕನ್ನಡದ ಹಬ್ಬದ ಸಂಭ್ರಮ ಕಾಣುವಂತಾಗಬೇಕು ಎಂದರು.

ಸಾಹಿತಿ ಡಾ. ಕುಶ್ವಂತ್ ಕೋಳಿಬೈಲು ಮಾತನಾಡಿ, ಸಾಂಸ್ಕೃತಿಕ ಮತ್ತು ಸಾಹಿತ್ಯ ಪರ ಕಾರ್ಯಕ್ರಮಗಳ ಮೂಲಕ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ಪ್ರತಿಯೋರ್ವರಲ್ಲಿಯೂ ಇರುವ ಸುಪ್ತ ಪ್ರತಿಭೆಯನ್ನು ಗುರುತಿಸಲು ಇಂಥ ಸಾಂಸ್ಕೃತಿಕ ಕಾರ್ಯಕ್ರಮಗಳ ಅಗತ್ಯ ಸಮಾಜಕ್ಕಿದೆ. ಯಾವುದೇ ಮಗುವಾದರೂ ವೇದಿಕೆ ಏರಿ ಪ್ರತಿಭಾ ಪ್ರದರ್ಶನ ಮಾಡಿದೆ ಎಂದರೆ ಆ ಮಗು ಬಹುಮಾನ ವಿಜೇತರಿಗೆ ಸಮಾನ. ನೂರಾರು ಮಕ್ಕಳು ಈ ಕಾರ್ಯಕ್ರಮದ ಮೂಲಕ ತಮ್ಮ ಪ್ರತಿಭೆಯನ್ನು ಬಾಲ್ಯದ ಹಂತದಲ್ಲಿಯೇ ಪ್ರದರ್ಶಿಸುತ್ತಿರುವುದು ಹೆಮ್ಮೆ ಪಡುವಂಥ ವಿಚಾರ ಎಂದು ಹೇಳಿದರು.

ಸಮರ್ಥ ಕನ್ನಡಿಗರು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ. ಜಯಲಕ್ಷಿö್ಮÃ ಮಾತನಾಡಿ, ಕಾಲೇಜುಗಳಲ್ಲಿ ಕನ್ನಡ ಭಾಷಾ ಕಲಿಕೆಯಿಂದ ವಿದ್ಯಾರ್ಥಿಗಳು ವಿಮುಖರಾಗುತ್ತಿದ್ದಾರೆ. ಕನ್ನಡದ ಬದಲಿಗೆ ಐಚ್ಚಿಕ ವಿಷಯವಾಗಿ ಸಂಸ್ಕೃತ, ಇಂಗ್ಲೀಷ್ ಭಾಷೆಯ ಕಲಿಕೆಗೆ ಆದ್ಯತೆ ನೀಡುತ್ತಿದ್ದಾರೆ. ವಿದ್ಯಾರ್ಥಿಯ ಬೌಧ್ದಿಕ ಮಟ್ಟವನ್ನೂ ಮೀರಿದ ಕನ್ನಡ ಪಠ್ಯಗಳಿಂದಾಗಿಯೇ ಈ ರೀತಿಯಾಗಿದೆ. ಪೋಷಕರು, ಶಿಕ್ಷಕರು ಎಷ್ಟೇ ಮನವೊಲಿಸಿದರೂ ವಿದ್ಯಾರ್ಥಿಗಳು ಕನ್ನಡ ಕಲಿಕೆಯ ಆಯ್ಕೆಗೆ ಮುಂದಾಗದಿರುವುದು ಕಳವಳಕಾರಿಯಾಗಿದೆ ಎಂದರು.

ಸಮರ್ಥ ಕನ್ನಡಿಗರು ಸಂಸ್ಥೆಯ ಸಂಸ್ಪಾಪಕ ಲಿಂಗೇಶ್ ಹುಣಸೂರು, ರಾಜ್ಯ ಪ್ರಧಾನ ಸಂಚಾಲಕ ಆನಂದ್ ದೆಗ್ಗನಹಳ್ಳಿ, ಗಿರಿಜಾಮಣಿ, ಸವಿತಾ ರಾಕೇಶ್, ಚಿತ್ರಾ ಆರ್ಯನ್, ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ., ಡಾ ಸತೀಶ್ ಇದ್ದರು.

ನಿಮ್ಮ ಪ್ರತಿಭೆ - ನಮ್ಮ ವೇದಿಕೆ ಕಾರ್ಯಕ್ರಮದ ಅಂಗವಾಗಿ ಛದ್ಮವೇಷ, ಸಮೂಹ ಗಾಯನ, ಸಮೂಹ ನೃತ್ಯ, ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳು ಆಯೋಜಿತವಾಗಿದ್ದವು. ಸಮರ್ಥ ಕನ್ನಡಿಗ ಸಂಸ್ಥೆ ರಾಜ್ಯ ಸಂಚಾಲಕ ಆನಂದ ದೆಗ್ಗನಹಳ್ಳಿ ಅಧ್ಯಕ್ಷತೆಯಲ್ಲಿ ಅಬ್ದುಲ್ ಕೌಸರ್ ಸಮನ್ವಯದಲ್ಲಿ ನಡೆದ ಕವಿಗೋಷ್ಟಿಯಲ್ಲಿ ಬಿ.ಜಿ. ಅನಂತಶಯನ, ಗಿರೀಶ್ ಕಿಗ್ಗಾಲು, ಡಾ ಸತೀಶ್, ಸಂಗೀತ ರವಿರಾಜ್, ರಂಜಿತ್ ಕವಲಪಾರ, ಕೃಪಾ ದೇವರಾಜ್, ಶ್ವೇತಾರವೀಂದ್ರ, ಹೇಮಂತ್ ಪಾರೇರ, ಸಹನಾ ಕಾಂತಬೈಲು, ಹೇಮಂತ್ ಹೊಸೂರು, ಹರಿಣಿ ವಿಜಯ್, ಲೀಲಾ ಕುಮಾರಿ ತೊಡಿಕಾನ, ವಿನೋದ್ ಮೂಡಗದ್ದೆ, ಓಂಶ್ರೀ ಧನ್ಯ ಕವನಗಳನ್ನು ವಾಚಿಸಿದರು