ಜಿಲ್ಲೆ

ಬಡಕುಟುಂಬಕ್ಕೆ ಮನೆ ಹಸ್ತಾಂತರ

Mangaluru - Nishantha Narayana

ವಿಟ್ಲ: ಸಮರ್ಪಣ್ ವಿಟ್ಲ ವತಿಯಿಂದ ಗ್ರಾಮದ ಬಡಕುಟುಂಬಕ್ಕೆ ನಿರ್ಮಾಣ ಮಾಡಿದ ಮನೆಯ ಗೃಹಪ್ರವೇಶ ರಾಜೇಶ್ ಭಟ್ ಪೌರೋಹಿತ್ಯದೊಂದಿಗೆ ನೆರವೇರಿತು.

ಮನೆ ನಿರ್ಮಾಣದಲ್ಲಿ ಸಹಕರಿಸಿದ ಧನಂಜಯ ನೆಕ್ಕರೆಕಾಡು, ರವಿ ಅಂಚನ್, ಕೀರ್ತನ್ ಸಣ್ಣಗುತ್ತು, ತೀರ್ಥೆಶ್, ಮಹೇಶ್ ಮೊದಲಾದವರನ್ನು ಗೌರವಿಸಲಾಯಿತು. ಸಮರ್ಪಣ್ ವಿಟ್ಲ ಅಧ್ಯಕ್ಷ ಯಶವಂತ್ ಎನ್, ಗೌರವಾಧ್ಯಕ್ಷ ಕೃಷ್ಣಯ್ಯ ವಿಟ್ಲ, ಉಪಾಧ್ಯಕ್ಷ ರವಿವರ್ಮ ವಿಟ್ಲ, ಯಾದವ ಮಡಿವಾಳಕೋಡಿ, ಕೋಶಾಽಕಾರಿ ನಿಖಿಲ್ ಸಾಲ್ಯಾನ್, ಕಾರ್ಯದರ್ಶಿ ರೋಹಿತ್ ಕಟ್ಟೆ, ಸಂಘಟನಾ ಕಾರ್ಯದರ್ಶಿ ರವಿಶಂಕರ್, ಪವನ್ ಕಟ್ಟೆ, ಗೌರವ ಸಲಹೆಗಾರ ವಿಶ್ವನಾಥ್ ನಾಯ್ತೊಟ್ಟು, ಸಂಚಾಲಕ ಹರೀಶ್ ಕೆ. ವಿಟ್ಲ, ನವಚೇತನ ಗೆಳೆಯರು ಬಳಗ ಇರಂದೂರು ಪಡೀಲ್, ಶ್ರೀ ಉಮಾಮಹೇಶ್ವರ ಸೇವಾ ವಿಶ್ವಸ್ಥ ಮಂಡಲ ಮಾಮೇಶ್ವರ ಅಧ್ಯಕ್ಷ ವೀರಪ್ಪಗೌಡ ರಾಯರಬೆಟ್ಟು, ಬಂಟ್ವಾಳ ತಾಲೂಕು ಒಕ್ಕಲಿಗ ಸಮಾಜ ಅಧ್ಯಕ್ಷ ಡಾ.ಸಿ.ಕೆ.ಗೌಡ , ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷ ಮೋಹನ್ ಇಂದ್ರಪಡ್ಪು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಸದಸ್ಯ ಅಬ್ದುಲ್ ರಹಿಮಾನ್ ನವಗ್ರಾಮ, ಮಾಜಿ ಯೋಧ ಬಾಲಕೃಷ್ಣ ಪೊನ್ನೆತ್ತಡಿ, ಕುಶಾಲಪ್ಪ ನಾಯ್ತೊಟ್ಟು, ವಿಟ್ಲ ಕೃಷಿ ಪತ್ತಿನ ಸಹಕಾರಿ ಸಂಘ ನಿರ್ದೇಶಕ ಹರೀಶ್ ಕಟ್ಟೆ, ವಿಶ್ವಸ್ಥ ಮಂಡಳಿ ಸದಸ್ಯ ಮೋನಪ್ಪಗೌಡ ರಾಯರ ಬೆಟ್ಟು, ರವಿ ಅಂಚನ್ ಮಾಡ್ತೇಲು ಮತ್ತಿತರರು ಉಪಸ್ಥಿತರಿದ್ದರು.