ಮಡಿಕೇರಿ:
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಈಗಾಗಲೇ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಹುತಾತ್ಮ ದಿನವನ್ನು ಪ್ರತಿವರ್ಷ ಆಚರಿಸಿಕೊಂಡು ಬರುತ್ತಿದ್ದು, ಮುಂದೆ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ದಿನವನ್ನು ಸುಳ್ಯದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾಹಿತಿ ನೀಡಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಸಮಾಗಮ ಸಭೆÉ’ಯಲ್ಲಿ ಮಾತನಾಡಿದರು.
ಕಳೆದ ಎರಡು ಅವಧಿಯಲ್ಲಿನ ಫೆಲೋಶಿಪ್‌ನ ಪುಸ್ತಕ ಹೊರತರಲು ಬಾಕಿ ಇದ್ದು, ಮೊದಲ ಸಭೆಯಲ್ಲಿಯೇ ಪುಸ್ತಕ ಹೊರ ತರಲು ನಿರ್ಧರಿಸಿರುವುದು ವಿಶೇಷವಾಗಿದೆ. ಅಕಾಡೆಮಿ ವತಿಯಿಂದ ‘ಹಿಂಗಾರ’ ಪುಸ್ತಕವನ್ನು ಹೊರತರಲಾಗುತ್ತಿದ್ದು, ಕಳೆದ 18 ತಿಂಗಳಿAದ ಪುಸ್ತಕ ಹೊರತಂದಿಲ್ಲ. ಹಾಗಾಗಿ ‘ಹಿಂಗಾರ ಸಂಯುಕ್ತ ಸಂಚಿಕೆ’ ಹೊರತರಲು ನಿರ್ಧರಿಸಲಾಗಿದೆ. 2022-2023ನೇ ಅವಧಿಯ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನವನ್ನು ನೀಡಲು ನಿರ್ಧರಿಸಲಾಗಿದೆ. ಅರೆಭಾಷೆ ಸಂಸ್ಕೃತಿ, ಸಾಹಿತ್ಯ, ಲೇಖನ, ಕವನ, ನಾಟಕ, ಸಾಕ್ಷö್ಯಚಿತ್ರ ಹೀಗೆ ವಿವಿಧ ರೀತಿಯ ಚಟುವಟಿಕೆಗಳನ್ನು ಆಯೋಜಿಸಲು ಅಕಾಡೆಮಿ ನಿರ್ಧರಿಸಿದ್ದು, ಸಾಹಿತ್ಯ, ಸಂಸ್ಕೃತಿ, ಸಂಶೋಧನೆ ಹಾಗೂ ದಾಖಲೀಕರಣಕ್ಕೆ ಒತ್ತು ನೀಡಲಾಗಿದೆ.
ಕರ್ನಾಟಕ ಹೆಸರು ನಾಮಕರಣವಾಗಿ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ನಾಲ್ಕು ಕಂದಾಯ ವಿಭಾಗದಲ್ಲಿ ಕಾರ್ಯಕ್ರಮ ಆಯೋಜಿಸಲು ಸರ್ಕಾರ ನಿರ್ಧರಿಸಿದ್ದು, ಆ ನಿಟ್ಟಿನಲ್ಲಿ ಮೈಸೂರು ವಿಭಾಗಕ್ಕೆ ಸಂಬAಧಿಸಿದAತೆ ಮಂಗಳೂರಿನಲ್ಲಿ 5 ಭಾಷಾ ಅಕಾಡೆಮಿಗಳು, ಒಂದು ಯಕ್ಷಗಾನ ಅಕಾಡೆಮಿ ಸೇರಿ ಸೆ.24 ಮತ್ತು 25 ರಂದು ಕಾರ್ಯಕ್ರಮ ಆಯೋಜಿಸಲಿವೆ. ಅಕಾಡೆಮಿ ಕಾರ್ಯಚಟುವಟಿಕೆಗಳು ಮತ್ತು ಅಭಿವೃದ್ಧಿಗೆ ಸಂಬAಧಿಸಿದAತೆ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಅರೆಭಾಷೆ ಸಮುದಾಯದ ವಿವಿಧ ಸಂಘಟನೆಗಳ ನಿರ್ದೇಶಕರು ನೀಡಿರುವ ಸಲಹೆಗೆ ಪೂರಕವಾಗಿ ಕಾರ್ಯಕ್ರಮ ಹಾಗೂ ಪುಸ್ತಕ ಪ್ರಕಟಣೆ ಮಾಡಲಾಗುವುದು ಎಂದು ಹೇಳಿದರು.
ಅಕಾಡೆಮಿ ಮಾಜಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ಮಾತನಾಡಿ ಅರೆಭಾಷೆಗೆ ಸಂಬAಧಿಸಿದAತೆ ಐಎಸ್‌ಒ ಸ್ಥಾನಮಾನ ಪಡೆಯಲು ಮತ್ತಷ್ಟು ಶ್ರಮಿಸಬೇಕಿದೆ. ಅರೆಭಾಷೆ ಸಾಹಿತ್ಯ ಮತ್ತು ಸಂಶೋಧನೆ ಹಾಗೂ ಪ್ರಕಟಣೆಗೆ ಹೆಚ್ಚಿನ ಒತ್ತು ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.
ಅಕಾಡೆಮಿ ಮತ್ತೊಬ್ಬ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯು ಭಾಷಾ ಅಕಾಡೆಮಿಯಾಗಿದ್ದು, ಅರೆಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ನಾಡಿನಾದ್ಯಂತ ಪಸರಿಸುವಂತಾಗಬೇಕು. ಎಂದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ ಅರೆಭಾಷೆ ಅಕಾಡೆಮಿ ಕಾರ್ಯಚಟುವಟಿಕೆಗೆ ಕೊಡಗು ಗೌಡ ಸಮಾಜಗಳ ಒಕ್ಕೂಟಗಳಿಂದ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬರಲಾಗಿದೆ. ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಒಳ್ಳೆಯ ಹೆಸರು ಮಾಡುವಂತಾಗಬೇಕು ಎಂದು ಹೇಳಿದರು.
ಕೊಡಗು ಗೌಡ ಸಮಾಜದ ಅಧ್ಯಕ್ಷ ಪೆರಿಯನ ಜಯಾನಂದ, ಮೈಸೂರು ಗೌಡ ಸಮಾಜದ ಕೊಂಬಾರನ ಬಸಪ್ಪ, ಸುಳ್ಯ ತಾಲೂಕಿನ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ, ಪುದಿಯನೆರವನ ರೇವತಿ ರಮೇಶ್, ಬಾರಿಯಂಡ ಜೋಯಪ್ಪ, ಅಕಾಡೆಮಿ ಮಾಜಿ ಸದಸ್ಯ ಎ.ಟಿ.ಕುಸುಮಾಧರ, ಪುರುಷೋತ್ತಮ ಕಿರ್ಲಾಯ, ಜಯಪ್ರಕಾಶ್ ಮೋಂಟಡ್ಕ, ಕೋರನ ಸರಸ್ವತಿ, ಚಂಡೀರ ಬಸಪ್ಪ, ಸೂದನ ಈರಪ್ಪ ಮಾತನಾಡಿ ವಿವಿಧ ಸಲಹೆಗಳನ್ನು ನೀಡಿದರು.
ಅಕಾಡೆಮಿ ಸದಸ್ಯ ಜ್ಞಾನೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ಪ್ರಮುಖರಾದ ತುಂತಜೆ ಗಣೇಶ್, ನವೀನ್ ಅಂಬೆಕಲ್ಲು, ಚಿಲ್ತಡ್ಕ ಪರಶುರಾಮ, ಸುರೇಶ್ ಅಮೈ, ಕೆ.ಟಿ.ವಿಶ್ವನಾಥ, ಎ.ಕೆ.ಹಿಮಕರ, ತೇಜಕುಮಾರ್ ಕುಡೆಕಲ್, ಪಿ.ಎಸ್.ಕಾರ್ಯಪ್ಪ, ಸಂದೀಪ್ ಪುಳಕಂಡ್ರ, ಲೋಕೇಶ್ ಊರುಬೈಲು ಚಂದ್ರಶೇಖರ್ ಪೆರಾಲು, ಚಂದ್ರಾವತಿ ಬಡ್ಡಡ್ಕ, ಲತಾ ಕುದ್ಪಾಜೆ, ಕಾವ್ಯಶ್ರೀ ಕಪಿಲ್, ರಿಜಿಸ್ಟಾçರ್ ಚಿನ್ನಸ್ವಾಮಿ ಇದ್ದರು.