ಜಿಲ್ಲೆ

ಮೋಹನ್‌ಗೆ ಸೆಲ್ಯೂಟ್ ದಿ ಸೈಲೆಂಟ್ ಪುರಸ್ಕಾರ

ಇಂದಿರಾ ಎನ್ ಕೆ

ಕಾರ್ಕಳ: ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ನಿವೃತ್ತ ಸೇವಾ ಸಿಬ್ಬಂದಿ ಮೋಹನ್ ಸಮಗಾರ ಅವರಿಗೆ ಜೇಸಿಐ ಬೆಳ್ಮಣ್ ಘಟಕದ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ ನೀಡಿ ಗೌರವಿಸಲಾಯಿತು.

ಘಟಕಾಧ್ಯಕ್ಷ ಪ್ರದೀಪ್ ಶೆಟ್ಟಿ, ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ಲ.ಕೆ ಸತ್ಯಶಂಕರ್ ಶೆಟ್ಟಿ, ಮುಖ್ಯಶಿಕ್ಷಕ ಗೌರವ್ ಆರ್.ಕೆ, ವಲಯಾಧಿಕಾರಿ ಸರಿತಾ ದಿನೇಶ್ ಸುವರ್ಣ, ವಲಯ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು, ಕಾರ್ಯದರ್ಶಿ ವೀರೇಂದ್ರ ಉಪಸ್ಥಿತರಿದ್ದರು.