ಹುನ್ನೂರು ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಿದ್ಧೇಶ್ವರ ಶ್ರೀಗಳಿಗೆ ಗುರುನಮನ ಸಲ್ಲಿಸಲಾಯಿತು. ಶಿವಪುತ್ರಯ್ಯ ಸಿದ್ಧಗಿರಿಮಠ, ಸಾಹಿತಿ ವಸಂತ ಅಗಸಿಮನಿ ಇತರರಿದ್ದರು. 
ಜಿಲ್ಲೆ

ಸಿದ್ಧೇಶ್ವರ ಶ್ರೀಗೆ ಗುರುನಮನ

ಜಮಖಂಡಿ(ಗ್ರಾ): ತಾಲೂಕಿನ ಹುನ್ನೂರು ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದ ಸತ್ಸಂಗ ಮಂಡಳಿಯಿಂದ ಸಿದ್ಧೇಶ್ವರ ಮಹಾಸ್ವಾಮಿಗಳಿಗೆ ಸೋಮವಾರ ಸಂಜೆ ಗುರುನಮನ ಸಲ್ಲಿಸಲಾಯಿತು.

ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು. ಎಸ್. ಡಿ. ಸಂತಿ ಅವರು ಶ್ರೀಗಳ ಅಂತಿಮ ಅಭಿವಾದನ ಪತ್ರದ ಸಾರಾಂಶ ವಿವರಿಸಿದರು. ಸುಭಾಷ ಚಿಂಚಖಂಡಿ ಅವರು ಶ್ರೀಗಳ ಕುರಿತು ರಚಿಸಿದ ಸ್ವರಚಿತ ಕವನವನ್ನು ಸುಶ್ರಾವ್ಯವಾಗಿ ಹಾಡಿದರು.

ಸಾಹಿತಿ ವಸಂತ ಅಗಸಿಮನಿ ಅವರು ಪೂಜ್ಯ ಶ್ರೀಗಳ ನಡೆ, ನುಡಿ, ಆಚಾರ ವಿಚಾರ ಬಗ್ಗೆ ಮಾತನಾಡಿದರು. ಶಿವಪುತ್ರಯ್ಯ ಸಿದ್ಧಗಿರಿಮಠ ಸಾನ್ನಿಧ್ಯ ವಹಿಸಿದ್ದರು. ಹುನ್ನೂರಿನ ಪಿಕೆಪಿಎಸ್ ಅಧ್ಯಕ್ಷರಾಗಿ ಆಯ್ಕೆಯಾದ ದಯಾನಂದ ಹೂಗಾರ ಅವರನ್ನು ಸನ್ಮಾನಿಸಲಾಯಿತು.