ಜಿಲ್ಲೆ

ಕಣ್ಣಿಗೆ ಖಾರದಪುಡಿ, ಚಿನ್ನದ ಸರ ಕಳವು

ಚಳ್ಳಕೆರೆ: ನಗರದ ಪಾವಗಡ ರಸ್ತೆಯಲ್ಲಿನ ಧವನಂ ಟೆಕ್ಸ್‌ಟೈಲ್ ಅಂಗಡಿಗೆ ಭಾನುವಾರ ಬೆಳಗ್ಗೆ ನುಗ್ಗಿದ ಕಳ್ಳರು, ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಘಟನೆ ವಿವರ: ಅಂಗಡಿ ಮತ್ತು ವಾಸದ ಮನೆ ಒಂದೇ ಕಡೆ ಇರುವ ಕಾರಣ ಅಂಗಡಿಯನ್ನು ಬೆಳಗ್ಗೆಯೇ ತೆರೆಯಲಾಗಿದ್ದು, ಮೂರು ಜನ ಕಳ್ಳರು ಬಂದು ವ್ಯಾಪಾರ ಮಾಡುವ ರೀತಿ ವರ್ತಿಸಿ ಕೃತ್ಯ ಎಸಗಿದ್ದಾರೆ.

ವಿಷಯ ತಿಳಿದ ಕೂಡಲೇ ನೂತನ ಎಸ್ಪಿ ಧಮೇಂದ್ರ ಕುಮಾರ್ ಮೀನಾ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.