ತಾವರಗೇರಾ ಸಮೀಪದ ಕಿಲ್ಲಾರಹಟ್ಟಿ ಬಳಿ ಮಂಗಳವಾರ ರಾತ್ರಿ ನಡೆದ ದರೋಡೆ ಸ್ಥಳಕ್ಕೆ ಎಸ್ಪಿ ಯಶೋದಾ ವಂಟಗೋಡಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. 
ಜಿಲ್ಲೆ

ಖಾರದಪುಡಿ ಎರಚಿ ದರೋಡೆ ಸ್ಥಳ ಪರಿಶೀಲನೆ

ತಾವರಗೇರಾ: ಸಮೀಪದ ಕಿಲ್ಲಾರಹಟ್ಟಿ ಬಳಿ ಮಂಗಳವಾರ ರಾತ್ರಿ ಕಣ್ಣಿಗೆ ಖಾರದಪುಡಿ ಎರಚಿ 5 ಲಕ್ಷ ರೂ. ದರೋಡೆ ನಡೆಸಿದ ಸ್ಥಳಕ್ಕೆ ಎಸ್ಪಿ ಯಶೋದಾ ವಂಟಗೋಡಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ದರೋಡೆಗೊಳಗಾದ ಲಿಂಗಸುಗೂರಿನ ಮೂವರು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ತಮ್ಮ ಅನುಕೂಲ ದೃಷ್ಟಿಯಿಂದ ಹೆಚ್ಚಿನ ಚಿಕಿತ್ಸೆಗೆ ಸಿಂಧನೂರಿಗೆ ತೆರಳಿದ್ದಾರೆ. ದರೋಡೆಕೋರರನ್ನು ಶೀಘ್ರವೇ ಪತ್ತೆ ಹಚ್ಚಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.

ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ ಕುಮಾರ, ಗಂಗಾವತಿ ಡಿವೈಎಸ್ಪಿ ಸಿದ್ದನಗೌಡ, ಕುಷ್ಟಗಿ ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐಗಳಾ ನಾಗರಾಜ ಕೋಟಗಿ, ಮಲ್ಲಪ್ಪ ವಜ್ರದ, ಮೌನೇಶ್ವರ ಪಾಟೀಲ ಇತರರಿದ್ದರು.