ಜಿಲ್ಲೆ

ಸಾಲಿಗ್ರಾಮ ಶ್ರೀ ಗುರುನರಸಿಂಹ ರಥೋತ್ಸವ

ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲ ವಾರ್ಷಿಕ ರಥೋತ್ಸವ ಸಂಪನ್ನಗೊಂಡಿತು. ದೇಗುಲದಲ್ಲಿ ಬೆಳಗ್ಗೆಯಿಂದ ಭಕ್ತರು ಭಾಗಿಯಾಗಿ ವಿವಿಧ ಪೂಜಾ ಕೈಂಕರ್ಯ ನೆರವೇರಿಸಿದರು. ಪಾನಕ ಪನಿವಾರ ಸೇವೆ, ಅಪರಾಹ್ನ ಅನ್ನಸಂತರ್ಪಣೆ, ಸಂಜೆ ರಥರೋಹಣ ಸಹಸ್ರ ಸಂಖ್ಯೆ ಭಕ್ತ ಸಮೂಹದ ನಡುವೆ ಜರುಗಿತು. ಸಂಜೆ ಓಲಗ ಮಂಟಪದಲ್ಲಿ ದಿ.ಪಾರಂಪಳ್ಳಿ ರಾಮಚಂದ್ರ ಐತಾಳ್ ಶಿಷ್ಯ ವೃಂದದಿಂದ ಸಂಗೀತ ಕಾರ್ಯಕ್ರಮ, ನಂತರ ಮಹಾಮಂಗಳಾರತಿ, ಭೂತಬಲಿ, ಶಯನೋತ್ಸವ ಕಾರ್ಯಕ್ರಮ ಜರುಗಿತು.

ದೇಗುಲ ಪ್ರಧಾನ ಅರ್ಚಕ ಜನಾರ್ದನ ಅಡಿಗ ಧಾರ್ಮಿಕ ವಿಧಿವಿಧಾನ ನೆರವೆರಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್. ಕಾರಂತ್ ದಂಪತಿ ಪೂಜಾ ವಿಧಿವಿಧಾನಗಳಲ್ಲಿ ಭಾಗಿಯಾದರು. ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.