ಸುಂಟಿಕೊಪ್ಪ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಒಂದರಲ್ಲಿ ಗ್ರಾಹಕರೊಬ್ಬರಿಗೆ ನೀಡಿರುವ ಬಿಯರ್ ಬಾಟಲಿ. 
ಜಿಲ್ಲೆ

ಅವಧಿ ಮೀರಿದ ಮದ್ಯ ಮಾರಾಟ

 ಸುಂಟಿಕೊಪ್ಪ: ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭ ಅವಧಿ ಮೀರಿದ ಮದ್ಯ ಮಾರಾಟ ಮಾಡಲಾಗಿದ್ದು, ಈ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಡಗಿಗೆ ಪ್ರವಾಸಿಗರ ದಂಡೇ ಆಗಮಿಸಿದ್ದು, ಹೊಸ ವರ್ಷ ಸಂಭ್ರಮದಲ್ಲಿದ್ದಾರೆ. ಈ ಮದ್ಯದಂಗಡಿಗಳಲ್ಲಿ ವ್ಯಾಪಾರ ಜೋರಾಗಿದೆ. ಸುಂಟಿಕೊಪ್ಪ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಬಾರ್ ಆ್ಯಂಡ್ ರೆಸ್ಟೋರೆಂಟ್‌ವೊಂದರಲ್ಲಿ ಗ್ರಾಹಕರೊಬ್ಬರು ಬಿಯರ್ ಖರೀದಿಸಿದ್ದು, ಅದನ್ನು ಒಪನ್ ಮಾಡುವ ಮೊದಲು ಹಳದಿ ಬಣ್ಣಕ್ಕೆ ತಿರುಗಿರುವುದು ಕಣ್ಣಿಗೆ ಬಿದ್ದಿದೆ. ತಕ್ಷಣ ಪರಿಶೀಲಿಸಿದಾಗ ಕಸ, ಹುಳುವಿನಂಥ ವಸ್ತುಗಳು ಕಂಡುಬಂದಿದೆ. ಇದರಿಂದ ಗ್ರಾಹಕ ಬೆಚ್ಚಿ ಬಿದ್ದಿದ್ದಾರೆ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೆಲ ಮಾರಾಟಗಾರರು ಅವಧಿ ಮೀರಿದ ಹಾಗೂ ಹುಳು ಮಿಶ್ರಿತ ಮದ್ಯ ಮಾರುತ್ತಿರುವುದು ಮದ್ಯಪ್ರಿಯರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಆಮಲಿನಲ್ಲಿ ಸೇವಿಸಿದ್ದಲ್ಲಿ ಆರೋಗ್ಯಕ್ಕೆ ಮಾರಕವಾಗುತ್ತಿತ್ತು ಎಂದು ಗ್ರಾಹಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.