ಜಿಲ್ಲೆ

ಸಕುಬಾಯಿ ನಾಟಕ ಪ್ರದರ್ಶನ

ಅವಿನಾಶ್ ಜೈನಹಳ್ಳಿ

ಸಪ್ತಸ್ವರ ಬಳಗದ ಪ್ರಾಯೋಜಕತ್ವದಲ್ಲಿ ನುಡಿರಂಗ ವತಿಯಿಂದ ನಾದಿರಬಾಯಿ ಅವರ ಏಕವ್ಯಕ್ತಿ ನಾಟಕ ‘ಸಕುಬಾಯಿ’ ಪ್ರದರ್ಶನವನ್ನು ಜೂ.18 ರಂದು ಸಂಜೆ 6.30ಕ್ಕೆ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ದಿವಂಗತ ರಂಗಸಂಗೀತ ತಜ್ಞ ಶ್ರೀನಿವಾಸ ಭಟ್(ಚೀನಿ) ಅವರ ನೆನಪಿನಲ್ಲಿ ಪ್ರದರ್ಶನ ಆಯೋಜಿಸಲಾಗಿದೆ. ಹುಲುಗಪ್ಪ ಕಟ್ಟಿಮನಿ ಅವರ ನಿರ್ದೇಶನದಲ್ಲಿ ನುಡಿ ಸುದರ್ಶನ ಅವರು ಸಕುಬಾಯಿ ಪಾತ್ರ ಅಭಿನಯಿಸಿದ್ದಾರೆ. ಮನೆ ಕೆಲಸದವಳು ತನ್ನ ಅನುಭವವನ್ನು ನಿರೂಪಿಸುತ್ತ, ಸಮಾಜದ ಪರಿಸ್ಥಿತಿಯನ್ನು ತೆರೆದಿಡುವ ಕಥೆ ಇದಾಗಿದೆ. ಉಮೇಶ್ ನಾರಾಯಣ ಸಾಲಿಯಾನ ಸಂಗೀತ ನೀಡಿದ್ದು, ಅರುಣ್ ಮೂರ್ತಿ ಬೆಳಕು ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ.