ಗೌರಿ ಹಬ್ಬದ ಪ್ರಯುಕ್ತ ಸಿರಿಗೇರಿಯಲ್ಲಿ ಶ್ರೀರಾಮ್ ಕಬಡ್ಡಿ ತಂಡದಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಜೈ ಶ್ರೀರಾಮ ತಂಡ ಪ್ರಥಮ (5001 ರೂ.), ಕಿಚ್ಚ ಬಾಯ್ಸ ತಂಡ ದ್ವಿತೀಯ ಬಹುಮಾನ (3001ರೂ.), ಕಪ್ ಪಡೆಯಿತು. ಗ್ರಾಪಂ ಅಧ್ಯಕ್ಷೆ ಹೊಳಗುಂದಿ ಲಕ್ಷ್ಮೀ ಕೆ.ದ್ಯಾವಣ್ಣ, ಗ್ರಾ ಪಂ ಸದಸ್ಯರಾದ ಎಸ್.ಎಂ.ಅಡಿವೆಯ್ಯ ಸ್ವಾಮಿ, ಕೆ.ದ್ಯಾವಣ್ಣ, ಪ್ರಮುಖರಾದ ಸೌಮ್ಯಾ, ಜಂಪಯ್ಯ, ಹಡಪದ ಮಂಜುನಾಥ್, ನಾಗಚಂದ್ರ ಇತರರಿದ್ದರು. 
ಜಿಲ್ಲೆ

ಸಕ್ಕರೆ ಆರತಿ ತಯಾರಕರಿಗೆ ಲಾಭ ತಂದ ಹಬ್ಬ

ಕಂಪ್ಲಿ: ಈ ವರ್ಷದ ಗೌರಿ ಹಬ್ಬವು ಸಕ್ಕರೆ ಆರತಿ ತಯಾರಕರಿಗೆ ಲಾಭ ತಂದುಕೊಟ್ಟಿದೆ. ನಿರೀಕ್ಷೆಗೂ ಮೀರಿ ಸಕ್ಕರೆ ಆರತಿಗಳು ಮಾರಾಟಗೊಂಡಿವೆ.

ನ.13ರಂದು 120 ರೂ.ಗೆ ಕೆಜಿಯಂತೆ ಸಕ್ಕರೆ ಆರತಿ ಮಾರಾಟ ಆರಂಭಗೊಂಡಿದ್ದು, ನ.14ರಂದು 150 ರೂ., ನ.15ರಂದು ಗೌರಿ ಹುಣ್ಣಿಮೆಯಂದು 250 ರೂ., ನ.16ರಂದು 250 ರೂ.ಯಿಂದ 300 ರೂ.ಗೆ ಕೆಜಿಯಂತೆ ಮಾರಾಟಗೊಂಡಿದೆ. ಭಾನುವಾರ ಕೊಂತಿ ರೊಟ್ಟಿಯಲ್ಲಿ ಗೌರಿ ಹಬ್ಬಕ್ಕೆ ಖರೀದಿಸಿದ್ದ ಸಕ್ಕರೆ ಆರತಿ ಬಳಕೆ ಮಾಡುವ ಕಾರಣ ದರ ದಿಢೀರ್ ಕುಸಿದು ಕೆಜಿಗೆ 100 ರೂ.ಗೆ ಮಾರಾಟಗೊಂಡಿತು.

ಗ್ರಾಮೀಣ ಜನರು ಸಕ್ಕರೆ ಆರತಿ ಖರೀದಿಸುವಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದರಿಂದ ಸಕ್ಕರೆ ಆರತಿ ದರವೂ ಏರಿಕೆ ಕಂಡಿದೆ. ಪ್ರತಿ ವರ್ಷ 500 ಕ್ವಿಂಟಾಲ್‌ಗೂ ಹೆಚ್ಚು ಸಕ್ಕರೆ ಆರತಿ ಮಾರಾಟವಾಗುವುದುಂಟು. ಈ ಬಾರಿ 100 ಕ್ವಿಂಟಾಲ್ ಸಕ್ಕರೆ ಆರತಿ ಕಡಿಮೆ ಉತ್ಪಾದಿಸಿದ್ದರಿಂದ ದರ ಏರಿಕೆಯಾಗಲು ಪ್ರಮುಖ ಕಾರಣವಾಗಿದೆ.

ಸಕ್ಕರೆ ಆರತಿ ಮಾರಾಟದಲ್ಲಿ ಶೇ.100 ಲಾಭಗಳಿಸಲು ಸಾಧ್ಯವಿದ್ದು, ಮನೆ ಮಂದಿಯೊಂದಿಗೆ ಕಾರ್ಮಿಕರಿಗೂ ಉತ್ತಮ ಕೂಲಿ ಹಣ ದೊರೆತಿದೆ. ರೈತರು, ಜನರು ಸಹ ಉತ್ಸಾಹದಿಂದ ಆರತಿ ಕೊಂಡುಕೊಂಡಿದ್ದರಿಂದ ಈ ವರ್ಷ ಸಕ್ಕರೆ ಆರತಿ ತಯಾರಕರಿಗೆ ಉತ್ತಮ ಲಾಭವಾಗಿದೆ ಎಂದು ಸಕ್ಕರೆ ಆರತಿ ತಯಾರಕಿ ಕುದ್ರಿ ಸುಭದ್ರಮ್ಮ ತಿಳಿಸಿದರು.