ಕುಣಿಗಲ್ : ಸಕಲೇಶಪುರ&ಹಾಸನ &ಕುಣಿಗಲ್ ಮಾರ್ಗವಾಗಿ ತಿರುಪತಿಗೆ ಹೊಸ ರೈಲು ಸಂಚಾರ ಆರಂಭಕ್ಕೆ ಕ್ರಮಕೆಗೊಳ್ಳುವುದ್ದಾಗಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆಯಿತ್ತರು.
ಗುರುವಾರ ಹಾಸನ ದಿಂದ ಕುಣಿಗಲ್ ಮಾರ್ಗವಾಗಿ ಬೆಂಗಳೂರಿಗೆ ವಿಶೇಷ ರೆಲಿನಲ್ಲಿ ರೈಲ್ವೆ ಹಿರಿಯ ಅಧಿಕಾರಿಗಳೊಂದಿಗೆ ತೆರಳುತ್ತಿದ್ದ ವಿ.ಸೋಮಣ್ಣ ಅವರನ್ನು ಕುಣಿಗಲ್ ರೈಲು ನಿಲ್ದಾಣದಲ್ಲಿ ತುಮುಲ್ ಮಾಜಿ ನಿರ್ದೇಶಕ, ಬಿಜೆಪಿ ಮುಖಂಡ ಡಿ.ಕಷ್ಣಕುಮಾರ್, ಜೆಡಿಎಸ್ ತಾಲೂಕು ಅಧ್ಯ ಬಿ.ಎನ್.ಜಗದೀಶ್, ಬಿಜೆಪಿ ಅಧ್ಯ ಕೆ.ಎಸ್.ಬಲರಾಮ್ ಸೇರಿದಂತೆ ಬಿಜೆಪಿ, ಜೆಡಿಎಸ್ ಪಗಳ ಕಾರ್ಯಕರ್ತರು ಸಚಿವರನ್ನು ಅದ್ದೂರಿಯಾಗಿ ಸ್ವಾಗತಿಸಿ ಜಯಘೋಷಗಳನ್ನು ಕೂಗಿದರು.
ಮನವಿ : ಬಿಜೆಪಿ ಮುಖಂಡ ಡಿ.ಕಷ್ಣಕುಮಾರ್, ತಾಲೂಕು ಜೆಡಿಎಸ್ ಅಧ್ಯ ಬಿ.ಎನ್.ಜಗದೀಶ್ ಪ್ರತ್ಯೇಕವಾಗಿ ಸಚಿವ ವಿ.ಸೋಮಣ್ಣಗೆ ಮನವಿ ಸಲ್ಲಿಸಿದರು. ಕುಣಿಗಲ್ನಿಂದ ನಿತ್ಯ ನೂರಾರು ಮಂದಿ ಸರ್ಕಾರಿ ನೌಕರರು ಸೇರಿ ಖಾಸಗಿ ಉದ್ಯೋಗಗಳಿಗೆ ಸಹಸ್ರಾರು ಜನರು ಬೆಂಗಳೂರಿಗೆ ಸಂಚರಿಸುತ್ತಿದ್ದಾರೆ.
ಆದರೆ, ಚಿಕ್ಕಬಾಣವಾರ ಬಳಿ ರೈಲ್ವೆ ಕ್ರಾಸಿಂಗ್ ಆಗುವುದರಿಂದ ರೈಲುಗಳು ಬಹಳ ಹೊತ್ತು ನಿಲುಗಡೆಯಾಗಿ ಯಶವಂತಪುರ ಮತ್ತು ಸಂಗೋಳ್ಳಿರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಹಳ ತಡವಾಗಿ ಹೋಗುವುದರಿಂದ ಜನರಿಗೆ ತೊಂದರೆಯಾಗಿದೆ. ಸಂಗೋಳ್ಳಿರಾಯಣ್ಣ ರೈಲ್ವೆ ನಿಲ್ದಾಣದಿಂದ ಕುಣಿಗಲ್, ಹಾಸನ ಮಾರ್ಗವಾಗಿ ಕಾರವಾರಕ್ಕೆ ಸಂಚರಿಸುವ ಪಂಚಗಂಗ ಎಕ್ಸ್ಪ್ರೆಸ್ ರೈಲನ್ನು ಕುಣಿಗಲ್ ರೈಲ್ವೆ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿಲುಗಡೆಗೆ ಆದೇಶ ನೀಡಲಾಗಿದೆ.
ಅದರ ಬದಲಾಗಿ ಕಾಯಂ ನಿಲುಗಡೆ ಆಗಬೇಕು. ಬೆಂಗಳೂರು ಮತ್ತು ಹಾಸನ ನಡುವೆ ಹೆಚ್ಚುವರಿ ರೈಲು ಸಂಚಾರಕ್ಕೆ ಮತ್ತು ಕಗ್ಗೆರೆ ಸಿದ್ದಲಿಂಗೇಶ್ವರ ತಪೋೇತ್ರಕ್ಕೆ ರಾಜ್ಯಾದ್ಯಂತ ನೂರಾರು ಮಂದಿ ಭಕ್ತರು ಬರುತ್ತಿದ್ದಾರೆ. ಹಾಗಾಗಿ ಆಲಪ್ಪನಗುಡ್ಡೆ ಬಳಿ ಮಿನಿ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಿಸಿ ರೈಲು ನಿಲುಗಡೆಗೆ ಕ್ರಮಕೆಗೊಳ್ಳಬೇಕೆಂದು ಮನವಿ ಮಾಡಿದರು.
ತಿರುಪತಿ ರೆಲಿಗೆ ಗೋವಿಂದ ಸ್ಮರಣೆ : ಕುಣಿಗಲ್, ತುರುವೇಕೆರೆ, ಹುಲಿಯೂರುದುರ್ಗ, ಹೆಬ್ಬೂರು, ಮಾಗಡಿ ಸೇರಿದಂತೆ ಹಲವು ತಾಲೂಕುಗಳಲ್ಲಿ ಅಸಂಖ್ಯಾತ ತಿಮ್ಮಪ್ಪನ ಭಕ್ತರಿದ್ದು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಲು ತುಂಬ ತೊಂದರೆಯಾಗಿರುತ್ತದೆ. ಹೀಗಾಗಿ ಸಕಲೇಶಪುರ ದಿಂದ ಹಾಸನ, ಚನ್ನರಾಯಪಟ್ಟಣ, ಕುಣಿಗಲ್ ಮಾರ್ಗವಾಗಿ ಹೊಸ ರೆಲು ಸಂಚಾರಕ್ಕೆ ಕ್ರಮಕೆಗೊಳ್ಳುವಂತೆ ಗೋವಿಂದ ಸ್ಮರಣೆ ಮಾಡುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಸಚಿವರಲ್ಲಿ ಮನವಿ ಮಾಡಿದರು.
ಗೊವಿಂದ ನಾಮ ಸ್ಮರಣಿಗೆ ಮನಸೋತ ಸಚಿವರು ಸಕಲೇಶಪುರ ತಿರುಪತಿ ನಡುವೆ ಹೊಸ ರೈಲು ಸಂಚಾರಕ್ಕೆ ಕ್ರಮಕೆಗೊಳ್ಳುತ್ತೇನೆ. ಇದು ನನ್ನ ಜವಾಬ್ದಾರಿಯಾಗಿದೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.