ಜಿಲ್ಲೆ

ಕರ ವಸೂಲಿ ಪಾರದರ್ಶಕವಾಗಿರಲಿ

ಎ. ಆರ್. ರಘುರಾಮ

ಸಕಲೇಶಪುರ : ಗ್ರಾಮ ಪಂಚಾಯಿತಿ ಕರ ವಸೂಲಿ ಪಾರದರ್ಶಕವಾಗಿರಲಿ ಎಂದು ಶಾಸಕ ಸಿಮೆಂಟ್ ಮಂಜು ಸೂಚನೆ ನೀಡಿದರು.
ಸೋಮವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಕರ ವಸೂಲಿಗಾರರ ಕರಾಮತ್ತುಗಳಿಗೆ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಕರ ವಸೂಲಿಗಾರರು ತಮ್ಮ ವ್ಯಾಪ್ತಿಯನ್ನೂ ಮೀರಿ ಗ್ರಾಪಂನ ಹಲವು ಕೆಲಸಗಳಲ್ಲಿ ತೊಡಗಿಕೊಂಡು ಕರ ವಸೂಲಿ ಹಣವನ್ನು ಸರಿಯಾಗಿ ಜಮಾ ಮಾಡುತ್ತಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಕ್ರಮ ವಹಿಸುವಂತೆ ತಾಪಂ ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸಿದರು.
ಕೆಲ ಗ್ರಾಪಂಗಳಲ್ಲಿ ಪಿಡಿಒಗಳನ್ನು ಕರ ವಸೂಲಿಗಾರರೇ ನಿಯಂತ್ರಿಸುತ್ತಿದ್ದಾರೆ. ಇದು ಸಲ್ಲದು. ತಾಲೂಕಿನ ಸಾಕಷ್ಟು ಶಾಲೆಗಳಲ್ಲಿ ಶೌಚಗೃಹದ ಸಮಸ್ಯೆ ಇದೆ ಎಂಬ ದೂರುಗಳು ಬಂದಿವೆ. ಈ ಬಗ್ಗೆ ಕ್ರಮ ವಹಿಸುವುದು ಅಗತ್ಯ ಎಂದು ಅವರು ಹೇಳಿದರು.