ಜಿಲ್ಲೆ

ಎಸ್‌ಎಸ್‌ಎಲ್‌ಸಿಯಲ್ಲಿ ಸಾಯಿರಾಜ ರಾಜ್ಯಕ್ಕೆ ಪ್ರಥಮ

ಜಗದೀಶ ಹೊಂಬಳಿ

ನಿಪ್ಪಾಣಿ ನಗರದ ವಿ.ಎಸ್.ಎಂ. ಜಿ.ಐ.ಬಾಗೇವಾಡಿ ಪದವಿಪೂರ್ವ ಮಹಾವಿದ್ಯಾಲಯ (ಪ್ರೌಢಶಾಲಾ ವಿಭಾಗ)ದ ವಿದ್ಯಾರ್ಥಿ ಸಾಯಿರಾಜ ಜ್ಯೋತಿಬಾ ಪಾಟೀಲ ಎಸ್‌ಎಸ್‌ಎಲ್‌ಸಿ ಮರು ಮೌಲ್ಯಮಾಪನದಲ್ಲಿ ಅಂಕಗಳು ಹೆಚ್ಚು ಬಂದಿದ್ದರಿಂದ ಮರಾಠಿ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ. 625 ರಲ್ಲಿ 617 ಅಂಕ ಪಡೆದಿದ್ದ ಸಾಯಿರಾಜ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ. ಇದೀಗ ಮರುಮೌಲ್ಯಮಾಪನದಲ್ಲಿ 2 ಅಂಕ ಹೆಚ್ಚಾಗಿ ಒಟ್ಟು 619 ಅಂಕ ಪಡೆದಿದ್ದಾನೆ. ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಉಪಕಾರ್ಯಾಧ್ಯಕ್ಷ ಪಪ್ಪು ಪಾಟೀಲ ಸಾಯಿರಾಜ ಪಾಟೀಲಗೆ ಅಭಿನಂದಿಸಿದ್ದಾರೆ.