ರೋಣ: ಇಂದಿಗೂ ಕೋಮುಸೌಹಾರ್ದತೆ ಎಂದರೆ ರಾಜ್ಯದಲ್ಲಿ ಸಂತ ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಭಟ್ಟರ ಒಡನಾಟವನ್ನೇ ನಿದರ್ಶನ ನೀಡುತ್ತಾರೆ ಎಂದು ಎಲ್.ಐ. ದಿಂಡೂರ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಶಶಿಧರ ಎಲ್. ದಿಂಡೂರ ಹೇಳಿದರು.
ಪಟ್ಟಣದ ದಿಂಡೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಸಂತ ಶಿಶುನಾಳ ಶರೀಫರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ತತ್ವಪದಗಳಿಗೆ ಪ್ರಸಿದ್ಧರಾಗಿದ್ದ ಸಂತ ಶಿಶುನಾಳ ಶರೀಫರು, ನಿಂತ ಸ್ಥಳದಲ್ಲೇ ಹಾಡು ಕಟ್ಟುತ್ತಿದ್ದರು. ಅವರು ಸುತ್ತಮುತ್ತ ನಡೆಯುತ್ತಿದ್ದ ಘಟನೆಗಳನ್ನೇ ತತ್ವಪದಗಳನ್ನಾಗಿ ಬದಲಾಯಿಸುತ್ತಿದ್ದರು ಎಂದರು.
ಎಲ್‌ಕೆಜಿ, ಯುಕೆಜಿ, 1, 2ನೇ ತರಗತಿ ವಿದ್ಯಾರ್ಥಿಗಳು ಸಂತ ಶಿಶುನಾಳ ಶರೀಫರ ವೇಷಭೂಷಣ ತೊಟ್ಟು ಗಮನಸೆಳೆದರು.
ವಿದ್ಯಾರ್ಥಿನಿ ತಮನ್ನಾ ಭಾಟಿ, ಸಂಜನಾ ಮಲ್ಲನಗೌಡರ, ಅನುಷ್ಕಾ ಕಟ್ಟಿಮನಿ ನಿರ್ವಹಿಸಿದರು.
ಶಿಕ್ಷಕರಾದ ಸುಮಿತ್ರಾ ಕೊಳ್ಳಪ್ಪನವರ, ಭಾರತಿ ಮಾತಾಜಿ, ಹಣಮಂತ ಬಸರಣವರ ಇತರರು ಇದ್ದರು.