ಕುಶಾಲನಗರ:
ಯು ಪಿ ಎಸ್ ಸಿ-ಎನ್ ಡಿ ಎ ಪರೀಕ್ಷೆಯಲ್ಲಿ ಕೊಡಗು ಸೈನಿಕ ಶಾಲೆಯ 19 ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. 12ನೇ ತರಗತಿಯ 60 ವಿದ್ಯಾರ್ಥಿಗಳಲ್ಲಿ 19 ವಿದ್ಯಾರ್ಥಿಗಳು 2024ನೇ ಸಾಲಿನ ಅತ್ಯಂತ ಹೆಚ್ಚು ಸ್ಪರ್ಧೆಯಿಂದ ಕೂಡಿರುವ ಕೇಂದ್ರ ಲೋಕ ಸೇವಾ ಆಯೋಗದ(ಯು ಪಿ ಎಸ್ ಸಿ) ನ್ಯಾಷನಲ್ ಡಿಫೆನ್ಸ್ ಅಕಾಡೆ (ಎನ್ ಡಿ ಎ) ಪರೀಕ್ಷೆಯಲ್ಲಿ (ಎನ್ ಡಿ ಎ 154ನೇ ಮತ್ತು ಐ ಎನ್ ಎ116ನೇ ಕೋರ್ಸ್) ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಾಧನೆಯು ಶಾಲೆಯ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇ. 31.67ರಷ್ಟು ಸಾಧನೆಯಾಗಿದೆ. ಶಾಲೆಯಲ್ಲಿ ನಿರಂತರವಾಗಿ ಶೈಕ್ಷಣಿಕ ಉತ್ಕೃಷ್ಟತೆಗೆ ಆದ್ಯತೆ ನೀಡುವುದರೊಂದಿಗೆ, ಭಾರತೀಯ ಸಶಸ್ತ್ರ ಪಡೆಗಳಿಗೆ ಶಾಲಾ ವಿದ್ಯಾರ್ಥಿಗಳನ್ನು ಅಧಿಕಾರಿಗಳಾಗಿ ಸೇರ್ಪಡೆಗೊಳಿಸುವ ಸಿದ್ಧತೆಯನ್ನು ನಿರಂತರವಾಗಿ ನಡೆಸುತ್ತಿದೆ. ಪ್ರಸ್ತುತ ವರ್ಷ ಎನ್ ಡಿ ಎ ಪರೀಕ್ಷೆಗೆ ಸಂಬAಧಿಸಿದAತೆ ರಚನಾತ್ಮಕವಾಗಿ ಎನ್ ಡಿ ಎ ಪರೀಕ್ಷಾ ತರಬೇತಿ ಕಾರ್ಯಕ್ರಮವನ್ನು ಐದು ಹಂತಗಳಲ್ಲಿ ಅಳವಡಿಸಿ ಯಶಸ್ಸನ್ನು ಸಾಧಿಸಲಾಗಿದೆ.
ಇದರೊಂದಿಗೆ ಶಾಲೆಯು ಯು ಪಿ ಎಸ್ ಸಿ, ಎನ್ ಡಿ ಎ/ ಐ ಎನ್ ಎ ಪಠ್ಯಕ್ರಮವನ್ನು ಸಮಗ್ರವಾಗಿ ಹೊಂದಿದ್ದು, ವಿದ್ಯಾರ್ಥಿಗಳ ಸಿದ್ಧತೆಗೆ ಅಗತ್ಯವಿರುವ ಎಲ್ಲಾ ಅಗತ್ಯ ಸಂಪನ್ಮೂಲಗಳನ್ನು ಹೊಂದಿರುವುದರೊAದಿಗೆ ಶಾಲೆಯ ಕೇಂದ್ರೀಕೃತ ಹಾಗೂ ಸಂಘಟಿತ ಪ್ರಯತ್ನವು ಯಶಸ್ಸಿನ ಹೊಸ ಶಿಖರವನ್ನೇರಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ತೇರ್ಗಡೆಗೊಂಡಿರುವ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಅರ್ಹತೆ ಹೊಂದಿದ್ದು, ಎಸ್ ಎಸ್ ಬಿ ಸಂದರ್ಶನಕ್ಕೆ ಹಾಜರಾಗಿ ಯಶಸ್ಸು ಪಡೆದ ನಂತರ, ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಎಜಿಮಲ(ಕೇರಳ)ದ ಇಂಡಿಯನ್ ನೇವಲ್ ಅಕಾಡೆಮಿಗೆ ಸೇರಿ, ತಮ್ಮ ತರಬೇತಿಯ ನಂತರ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಕಮಿಷನ್ಡ್ ಅಧಿಕಾರಿಯಾಗುತ್ತಾರೆ.