ಜಿಲ್ಲೆ

ಸಾಯಿಕುಮಾರ್‌ಗೆ ಒಬಿಸಿ ಉಪಾಧ್ಯಕ್ಷ ಸ್ಥಾನ

reportermys

ಮಡಿಕೇರಿ:
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷರನ್ನಾಗಿ ಸುಂಟಿಕೊಪ್ಪದ ಟಿ.ಕೆ. ಸಾಯಿಕುಮಾರ್ ಅವರನ್ನು ನೇಮಿಸಿ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಅಧ್ಯಕ್ಷ ಮಧುಬಂಗಾರಪ್ಪ ಆದೇಶ ಹೊರಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅನುಮೋದನೆ ಹಿನ್ನೆಲೆಯಲ್ಲಿ ಈ ನೇಮಕ ಮಾಡಲಾಗಿದ್ದು, ಪಕ್ಷದ ರಾಜ್ಯ, ಜಿಲ್ಲೆ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನ ಮತ್ತು ಸ್ಥಳೀಯ ಮುಖಂಡರ ಸಹಯೋಗದಲ್ಲಿ ಪಕ್ಷದ ಬಲವರ್ದನೆಗೆ ಕಾರ್ಯೋನ್ಮುಖವಾಗುವಂತೆ ಮಧುಬಂಗಾರಪ್ಪ ಸೂಚಿಸಿದ್ದಾರೆ.

ಕೆಲವು ದಿನಗಳ ಹಿಂದೆ ಆಮ್ ಆದ್ಮಿ ಪಕ್ಷ ಸೇರಿದ್ದ ಟಿ.ಕೆ. ಸಾಯಿಕುಮಾರ್ ಆ ಪಕ್ಷದ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿಯೂ ಹೆಸರು ಪ್ರಕಟವಾಗಿತ್ತು. ಆದರೆ ಇತ್ತೀಚೆಗೆ ಸಿದ್ದಾಪುರದಲ್ಲಿನ ನಡೆದಿದ್ದ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಧುಬಂಗಾರಪ್ಪ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು.