ಹುಬ್ಬಳ್ಳಿ: ಇಲ್ಲಿಯ ಹಳೇ ಕೋರ್ಟ್ ಸರ್ಕಲ್ ನಲ್ಲಿರುವ ಶ್ರೀ ಸಾಯಿ ಮಂದಿರದಲ್ಲಿ ಗುರು ಪೂರ್ಣಿಮೆ ನಿಮಿತ್ತ ಜುಲೈ 10ರಂದು ಉತ್ಸವ ಏರ್ಪಡಿಸಲಾಗಿದೆ.
ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 5.15ಕ್ಕೆ ಕಾಕಡಾರತಿ, ಮಂಗಲಸ್ನಾನ, ಅಲಂಕಾರ, ಪೂಜೆ, ಆರತಿ, ಬೆಳಗ್ಗೆ 8.30ಕ್ಕೆ ಸಚ್ಚರಿತ್ರೆ ಪಾರಾಯಣ ಸಮಾರೋಪ ನಡೆಯಲಿದೆ.
ಬೆಳಗ್ಗೆಯಿಂದ ಮಹಾಭಿಷೇಕ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಕುಂಕುಮಾರ್ಚನೆ ವಿಧಿ ವಿಧಾನಗಳು ನಡೆಯಲಿವೆ.
ಬೆಳಗ್ಗೆ 11ಕ್ಕೆ ಉತ್ಸವದ ಸಭಾ ಕಾರ್ಯಕ್ರಮ ನಡೆಯಲಿದ್ದು, ಗಂಗಾವತಿ ಸಿಲ್ಕ್ ಪ್ಯಾಲೇಸ್ ಮಾಲೀಕರಾದ ಪಾರ್ವತಿ ಕಮತಗಿ ಅವರು ಉದ್ಘಾಟಿಸುವರು. ಮಂಡಳಿ ಅಧ್ಯಕ್ಷ ಮಹಾದೇವ ಮಾಶ್ಯಾಳ ನೇತೃತ್ವ ವಹಿಸುವರು.
ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಮಹಾಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6ಕ್ಕೆ ಶ್ರೀ ಸಾಯಿ ಬಾಬಾರ ಭಾವಚಿತ್ರದ ಭವ್ಯ ಮೆರವಣಿಗೆ ಹಾಗೂ ರಥೋತ್ಸವ, ಪಲ್ಲಕ್ಕಿ ಉತ್ಸವ ವಿವಿಧ ವಾದ್ಯ ಮೇಳದೊಂದಿಗೆ ಜರುಗುವುದು.
ಜುಲೈ 11ರಂದು ಸಂಜೆ 6ಕ್ಕೆ ಮಂತ್ರಪುಷ್ಪ ಗೋಪಾಲಕಾವಲಾ, ಧೂಪಾರತಿ, ತೀರ್ಥಪ್ರಸಾದ ವಿತರಣೆ ನಡೆಯಲಿದೆ.