ಮೂಡಲಗಿ: ಸಾಧನೆಗೆ ಬಡವ, ಶ್ರೀಮಂತ ಮುಖ್ಯವಲ್ಲ. ಸಾಯಿಬಾಬಾರ ಮೌಲ್ಯಗಳನ್ನು ಯಾರು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ ಅವರೇ ಸಾಧಕರಾಗುತ್ತಾರೆ ಎಂದು ಗೋಕಾಕ ತಹಸೀಲ್ದಾರ್ ಮೋಹನ ಭಸ್ಮೆ ಹೇಳಿದರು.
ತಾಲೂಕಿನ ಕಲ್ಲೋಳಿ ಪಟ್ಟಣದ ಪಿಜೆಎನ್ ಪ್ರೌಢಶಾಲೆಯಲ್ಲಿ ಸಾಯಿ ನಿತ್ಯೋತ್ಸವ ಲೋಕಸೇವಾ ಟ್ರಸ್ಟ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸತ್ಯಸಾಯಿ ಬಾಬಾ 99ನೇ ಜನ್ಮದಿನದ ಸಮಾರಂಭದಲ್ಲಿ ಮಾತನಾಡಿದರು. ಪ್ರತಿನಿತ್ಯ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ನಿರೀಕ್ಷೆ ಇಲ್ಲದೆ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಯಾವುದೇ ಸಾಧನೆಗೆ ಗುರಿ ಮುಖ್ಯ. ಆಲೋಚನೆಯೊಂದಿಗೆ ಮುನ್ನಡೆದಾಗ ಗುರಿ ಮುಟ್ಟುವಲ್ಲಿ ಸಲವಾಗುತ್ತೇವೆ ಎಂದರು.
ಉಪನ್ಯಾಸಕಿ ಮಹಾದೇವಿ ಹುಕ್ಕೇರಿ ಮಾತನಾಡಿದರು. ಸಾಯಿನಿತ್ಯೋತ್ಸವ ಲೋಕಸೇವಾ ಟ್ರಸ್ಟ್ ಲೋಗೋ ಬಿಡುಗಡೆಗೊಳಿಸಲಾಯಿತು. ನಿಂಗಾಪುರ ಸಾಯಿನಿತ್ಯೋತ್ಸವ ಲೋಕಸೇವಾ ಟ್ರಸ್ಟ್ ಅಧ್ಯಕ್ಷ ಆರ್ ಆರ್.ನಾಡಗೌಡರ ಅಧ್ಯಕ್ಷತೆ ವಹಿಸಿದ್ದರು. ಆರ್ಯುವೇದ ವೈದ್ಯ ತುಕಾರಾಮ ಉಮರಾಣಿ, ಶಿಕ್ಷಕ ಅರವಿಂದ ಚೌವಡನ್ನವರ, ಪ್ರಕಾಶ ಕುರಬೇಟ, ಶಿಕ್ಷಕಿ ಕೆ.ಎಂ.ಭರನಟ್ಟಿ, ಪರಪ್ಪ ಗಿರೆಣ್ಣವರ, ಮಲ್ಲಪ್ಪ ಉಳ್ಳಾಗಡ್ಡಿ, ಸದಸ್ಯರಾದ ಸಚಿನ ಭಾಗೋಜಿ, ಭೀಮಶಿ ಹುಲಕುಂದ, ನಾಮದೇವ ಉಮರಾಣಿ, ಬಸವರಾಜ ಸಪ್ಪಡ್ಲ, ಸಿದ್ದು ಗದಾಡಿ, ವಿನಾಯಕ ಪರವಿನಾಯ್ಕರ, ವಿ.ವೈ. ಕೋಳದೂರ, ದುಂಡಪ್ಪ ಬೀರಗೌಡರ, ರಮೇಶ ಲಂಗೋಟಿ ಇತರರಿದ್ದರು.