ಜಿಲ್ಲೆ

ಲೇಖಕಿ ಸಹನಾ ಜೊತೆ ಸಂವಾದ

Dharwada - Basavaraj Idli

ಹುಬ್ಬಳ್ಳಿ: ಕ್ಷಮೆ, ಅವಸಾನ, ಕಶೀರ ಮುಂತಾದ ಕಾದಂಬರಿಗಳ ಮೂಲಕ ಜನಪ್ರಿಯರಾದ ಲೇಖಕಿ ಸಹನಾ ವಿಜಯಕುಮಾರ ಅವರು ಜ. 5ರಂದು ನಗರಕ್ಕೆ ಆಗಮಿಸಲಿದ್ದಾರೆ.

ಹೊಸ ಕಾದಂಬರಿ- ಮಾಗಧ ಬಿಡುಗಡೆಯಾಗಿ ತಿಂಗಳೊಳಗೆ ಮೂರು ಮುದ್ರಣ ಕಂಡಿರುವ ದೊಡ್ಡ ಗಾತ್ರದ ಕಾದಂಬರಿಯ ರಚನೆಯ ಹಿನ್ನೆಲೆಯನ್ನು ಅವರು ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

ಕನ್ನಡದ ದೊಡ್ಡ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ಮಾರ್ಗದರ್ಶನದಲ್ಲಿ ಮಾಗಿದ ಕಾದಂಬರಿಕಾರರಾಗುತ್ತ ಸಾಗಿರುವ ಅವರ ಬೆಳವಣಿಗೆಯೂ ನಮ್ಮಲ್ಲಿ ತುಂಬ ಕುತೂಹಲ ಮೂಡಿಸಿದೆ.

ಈ ಕಾರಣದಿಂದ ಅವರೊಂದಿಗೆ ನಾವು ಸ್ವಲ್ಪ ಹೊತ್ತು ಮಾತಾಡೋಣ, ಮಾಗಧದ ಬರವಣಿಗೆ ಹಿನ್ನೆಲೆಯ ಅವರ ಅಭ್ಯಾಸ, ಪ್ರವಾಸ, ಶ್ರಮ, ಕಲಾವಂತಿಕೆ- ಹೀಗೆ ಪ್ರಶ್ನೋತ್ತರ ರೂಪದ ಮಾತುಕತೆಯಾಡೋಣ.

ಎಂದಿನಂತೆ ಹೀಗೊಂದು ಸಾಹಿತ್ಯ ಸಲ್ಲಾಪದ ವ್ಯವಸ್ಥೆ ಮಾಡಿರುವವರು ಸಾಹಿತ್ಯ ಭಂಡಾರದ ಸುಬ್ಬಣ್ಣ. ಅವರ ಕೊಪ್ಪಿಕರ್ ರಸ್ತೆಯ ಅಂಗಡಿಯ 'ಅನಂತ ಮಹಡಿಯ' ಮೇಲೆ ಜ. 5ರಂದು ಸಂಜೆ 5.-30ಕ್ಕೆ ಕಾರ್ಯಕ್ರಮ ಏರ್ಪಾಟಾಗಿದೆ.

ಸಾಹಿತ್ಯಾಸಕ್ತರು ಸೇರಬೇಕು ಎಂದು ಹೂಬಳ್ಳಿ ಲೇಖಕಿಯರ ಬಳಗದ ನಂದಾ ಕುಲಕರ್ಣಿ ಅವರು ಕೋರಿದ್ದಾರೆ.