ಸಾಹಿಲ್ ಧನಶೆಟ್ಟಿ  
ಜಿಲ್ಲೆ

ನರೇಗಾ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಸಾಹಿಲ್ ಧನಶೆಟ್ಟಿ ಆಯ್ಕೆ

Vijyapura - Parsuram Bhasagi

ವಿಜಯಪುರ: ಕರ್ನಾಟಕ ರಾಜ್ಯ ಮಹಾತ್ಮ ಗಾಂಧಿ ನರೇಗಾ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಸಾಹಿಲ್ ಧನಶೆಟ್ಟಿ ಆಯ್ಕೆಯಾಗಿದ್ದಾರೆ.

ಇಂಡಿ ತಾಲೂಕು ಪಂಚಾಯಿತಿಯಲ್ಲಿ ತಾಂತ್ರಿಕ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷರಾಗಿದ್ದು, ಪಿಡಿಒ ಅಶೋಕ ಹೊನವಾಡ ಸೇರಿದಂತೆ ಇಂಡಿ ತಾಲೂಕಿನ ಪಿಡಿಒಗಳು, ಹಿರೇಮಸಳಿ ಗ್ರಾಮಸ್ಥರಾದ ಗಂಗು ಮರಡಿ, ರವಿ ರಾಯಜಿ, ಸನಾವುಲ್ಲಾ ಗೂಗಿಹಾಳ ಮತ್ತಿತರರು ಸಂತಸ ವ್ಯಕ್ತಪಡಿಸಿದ್ದಾರಲ್ಲದೇ ಸನ್ಮಾನಿಸಿ ಗೌರವಿಸಿದರು.