ಜಿಲ್ಲೆ

ಹುಬ್ಬಳ್ಳಿಯಲ್ಲಿ ಶ್ರೀ ಸಹಸ್ರಾರ್ಜುನ ಜಯಂತಿ ಸಂಭ್ರಮ,  ಬೆಳ್ಳಿ ಮೂತಿರ್ಯ ಭವ್ಯ ಮೆರವಣಿಗೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ (ಎಸ್ಎಸ್ಕೆ) ವತಿಯಿಂದ ಶುಕ್ರವಾರ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ನಗರದ ದಾಜಿಬಾನಪೇಟ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಉತ್ಸವ ಅಂಗವಾಗಿ ಕಾಕಡಾರತಿ ಅಭಿಷೇಕ ತೊಟ್ಟಿಲೋತ್ಸವ ಹೋಮ ಹವನ ಹಾಗೂ ಧ್ವಜಾರೋಹಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ ಭಾವದಿಂದ ನಡೆದವು.

ಶುಕ್ರವಾರ ಬೆಳಗ್ಗೆ 6ಗಂಟೆಯಿಂದ ಶ್ರೀ ಸಹಸ್ರಾರ್ಜುನ ಮಹಾರಾಜರ ಬೆಳ್ಳಿ ಮೂರ್ತಿಗೆ ಪೂಜೆ, ಅಭಿಷೇಕ ನೆರವೇರಿಸಲಾಯಿತು. ಮಹಿಳೆಯರಿಂದ ತೊಟ್ಟಿಲೋತ್ಸವ ಸಂಭ್ರಮದಿಂದ ಜರುಗಿತು. ಮಧ್ಯಾಹ್ನದವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮ, ಪ್ರಸಾದ ವಿತರಣೆಗಳು ನಡೆದವು.

ಕರ್ನಾಟಕ ರಾಜ್ಯ ಎಸ್.ಎಸ್.ಕೆ. ಸಮಾಜದ ಅಧ್ಯಕ್ಷ ಶಶಿಕುಮಾರ ಮೆಹರವಾಡೆ ಅವರು ಬೆಳಗ್ಗೆ ಉತ್ಸವದ ಅಂಗವಾಗಿ ತುಳಜಾಭವಾನಿ ದೇವಸ್ಥಾನ ಎದುರು ಧ್ವಜಾರೋಹಣ ನೆರವೇರಿಸಿದರು. ಸಮಾಜ ಬಾಂಧವರಿಗೆ ಜಯಂತ್ಯೋತ್ಸವದ ಶುಭಾಶಯ ಕೋರಿದರು.

ಕೇಂದ್ರ ಪಂಚ ಸಮಿತಿಯ ಮುಖ್ಯ ಧರ್ಮದರ್ಶಿ ಸತೀಶ ಮೆಹರವಾಡೆ, ಉಪ ಮುಖ್ಯ ಧರ್ಮದರ್ಶಿಗಳಾದ ಕೆ.ಪಿ. ಪೂಜಾರಿ ಹಾಗೂ ಭಾಸ್ಕರ ಎನ್. ಜಿತೂರಿ, ಗೌರವ ಕಾರ್ಯದರ್ಶಿ ಎನ್.ಎನ್. ಖೋಡೆ, ಸಹ ಕಾರ್ಯದರ್ಶಿ ಟಿ.ವಿ. ಪೂಜಾರಿ, ಕೋಶಾಧಿಕಾರಿ ಶ್ರೀಕಾಂತ ಹಬೀಬ, ಕೇಂದ್ರ ಪಂಚ ಸಮಿತಿ ಮಾಜಿ ಮುಖ್ಯ ಧರ್ಮದರ್ಶಿ ನೀಲಕಂಠಸಾ ಜಡಿ, ಟ್ರಸ್ಟಿಗಳಾದ ರಂಗಾ ಬದ್ದಿ, ಜಯರಾಮ ಪವಾರ, ರಾಜು ಧರ್ಮದಾಸ, ಶಂಕರ ಹಬೀಬ, ಗೋಪಾಲ ಬದ್ದಿ, ಸಮಾಜದ ಪ್ರಮುಖರಾದ ಬಾಳು ಮಗಜಿಕೊಂಡಿ, ಕಾಶಿನಾಥ ಖೋಡೆ, ಲಕ್ಷ್ಮಣ ದಲಬಂಜನ್, ಯೋಗೇಶ ಹಬೀಬ, ಸುಭಾಸ ಭಾಂಡಗೆ, ಉತ್ಸವ ಸಮಿತಿ ಸಂಚಾಲಕ ಮಂಜು ರತನ, ಮಹಿಳಾ ಸಂಚಾಲಕಿ ರಾಜಶ್ರೀ ಜಡಿ, ನೂರಾರು ಸಮಾಜ ಬಾಂಧವರು, ಯುವಕರು, ಮಹಿಳಾ ಮುಖಂಡರು ಪಾಲ್ಗೊಂಡಿದ್ದರು.

ಮೆರವಣಿಗೆ: ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಅಂಗವಾಗಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಬೆಳ್ಳಿ ಮೂರ್ತಿ ಮೆರವಣಿಗೆಯು ಸಡಗರದಿಂದ ನಡೆಯಿತು. ಶಾಸಕ ಮಹೇಶ ಟೆಂಗಿನಕಾಯಿ ಮೆರವಣಿಗೆ ಉದ್ಘಾಟಿಸಿದರು.