ಜಿಲ್ಲೆ

ಸಗ್ರಾಮಕ ಶನಿ ಶಾಂತಿ ಯಾಗ

ಸೌಮ್ಯ ಆರ್

ಮೂಲ್ಕಿ: ಕೋಲ್ನಾಡು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ ಸಗ್ರಾಮಕ ಶನಿ ಶಾಂತಿ ಯಾಗ ನಡೆಯಿತು. ಧಾರ್ಮಿಕ ಕಾರ್ಯಕ್ರಮ ಅಂಗವಾಗಿ ಅನಂತರಾಮ ಭಟ್ ತೋಕೂರು, ಕ್ಷೇತ್ರದ ಅರ್ಚಕ ಗುರುಮೂರ್ತಿ ಭಟ್, ಗೋಪಾಲ ಭಟ್, ಅನಂತರಾಮ ಭಟ್, ಪೌರೋಹಿತ್ಯದಲ್ಲಿ ಪ್ರಾತಃಕಾಲ ವಿಶೇಷ ಪ್ರಾರ್ಥನೆ ಹಾಗೂ ಯಾಗಕ್ಕೆ ಚಾಲನೆ ನೀಡಲಾಯಿತು. ಬೆಳಗ್ಗೆ ಯಾಗದ ಪೂರ್ಣಾಹುತಿ, ಪ್ರಸಾದ ವಿತರಣೆ ನಡೆಯಿತು.

ಯಾಗದ ಕರ್ತೃ ಅನಂತರಾಮ ಭಟ್, ರಾಜೇಶ್ ಭಟ್ ಕೆರೆಕಾಡು, ಅಕ್ಷಯ್ ಭಟ್, ಚಂದ್ರಶೇಖರ್ ರಾವ್ ಎಸ್.ಕೋಡಿ, ಕ್ಷೇತ್ರದ ಆಡಳಿತ ಮೊಕ್ತೇಸರ ಪಾದೆಮನೆ ಜಯಂತ ರೈ, ರಾಮಚಂದ್ರ ನಾಯಕ್, ವಿದ್ಯಾಧರ್ ಶೆಟ್ಟಿ, ಶೇಖರ್ ಶೆಟ್ಟಿ, ಮಾದವ ಶೆಟ್ಟಿ ಉತ್ರಂಜೆ, ಪ್ರವೀಣ್ ಶೆಟ್ಟಿ, ನಿರುಪಮ ಶೆಟ್ಟಿ, ರೋಹಿಣಿ ಶೆಟ್ಟಿ, ಜನಾರ್ದನ ಶೆಟ್ಟಿಗಾರ್ ಉಪಸ್ಥಿತರಿದ್ದರು.