ವಿಜಯಪುರ : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರ$್ಯ ಸಂಭ್ರಮದಲ್ಲಿ ನೂರಾರು ಮಕ್ಕಳು, ಶಿಕ್ಷಕರು ಮಿಂದೆದ್ದರು. ಮಕ್ಕಳ ವೇಷ ಭೂಷಣ ಸ್ವಾತಂತ್ರೋತ್ಸವಕ್ಕೆ ಮೆರಗು ತಂದಿತು. ಮೆರವಣಿಗೆಯುದ್ದಕ್ಕೂ ಎತ್ತ ನೋಡಿದರೂ ಕೇಸರಿ, ಬಿಳಿ, ಹಸಿರು ಬಾವುಟಗಳು ಕಂಗೊಳಿಸಿದವು. ಮಕ್ಕಳ ಸಾಂಸತಿಕ ಕಾರ್ಯಕ್ರಮ ಎಲ್ಲರನ್ನೂ ಆಕರ್ಷಿಸಿತು. ಮಕ್ಕಳು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದು ನೆರೆದಿದ್ದವರಲ್ಲಿ ದೇಶಭಕ್ತಿ ಕಿಚ್ಚು ಹುಟ್ಟಿಸುವಂತೆ ಮಾಡಿತು. ಪುಟ್ಟ ಪುಟ್ಟ ಪುಟಾಣಿಗಳು ವಿವಿಧ ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಿದ್ದು ನೆರೆದಿದ್ದವರನ್ನು ಮಂತ್ರಮುಗ್ದರನ್ನಾಗಿಸಿತು. ಶಿಕ್ಷಕರಾದ ಡಿ ಎಂ ಮಂಜುನಾಥ್, ತಬಲ ಹಾಗೂ ಹಾಮೋರ್ನಿಯಂ ವಾದಕರಾದ ದಾಸಪ್ಪ, ಸೈಕಲ್ ಪರ್ಯಾಟಕರಾದ ಕುಮಾರ್ ಟೈಲರ್ ವಿನುತ್, ಅಂಗನವಾಡಿ ಕಾರ್ಯಕರ್ತೆ ಮಾರತಮ್ಮ ಅವರನ್ನು ಸನ್ಮಾನಿಸಲಾಯಿತು.
ಧ್ವಜಾರೋಹಣ ನೆರವೇರಿಸಿದ ಪುರಸಭಾ ಅಧ್ಯೆ ಭವ್ಯ ಮಹೇಶ್ ವಿವಿಧ ಶಾಲೆಗಳ ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಿದರು. ಪುರಸಭೆಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಪುರಸಭಾ ಸದಸ್ಯರು ಗೈರಾಗಿದ್ದು ಪುರಸಭೆಯಲ್ಲಿನ ಗುಂಪುಗಾರಿಕೆ ತೋರಿಸುತ್ತಲಿತ್ತು. ಸಂಗೀತ ನಿರ್ದೇಶಕ ವಿ.ಎಂ.ನಾಯ್ಡು ನೇತೃತ್ವದಲ್ಲಿ ಗಂಟಸಾಲ ಖ್ಯಾತಿಯ ಮಹಾತ್ಮಾಂಜನೇಯರ ದೇಶಭಕ್ತಿ ಗೀತೆಗಳನ್ನು ಹಾಡಿದರು. ಪುರಸಭಾ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಉಪಾಧ್ಯಕ್ಷರಾದ ತಾಜುನ್ನಿಸ ಮಹಬೂಬ್ ಪಾಷಾ, ಸದಸ್ಯರಾದ ಸಿ.ನಾರಾಯಣಸ್ವಾಮಿ, ಶಿಲ್ಪಾ ಅಜಿತ್, ರಾಧಮ್ಮ ಪ್ರಕಾಶ್, ಕವಿತಾ ಅಂಜನಪ್ಪ, ಆಯಿಷ ಸೈಫುಲ್ಲಾ, ಎಂ ಭೈರೇಗೌಡ, ಪುರಸಭಾ ಇಂಜಿನಿಯರ್ ಶೇಖರ, ಆರೋಗ್ಯ ಅಧಿಕಾರಿಗಳಾದ ಲಾವಣ್ಯಾ, ಶಹರಿ ರೋಜ್ಗಾರ್ ಯೋಜನಾಧಕಾರಿ ಶಿವ ನಾಗೇಗೌಡ,
ಜನಾರ್ದನ್, ಅನಿಲ್ ಉಪಸ್ಥಿತರಿದ್ದರು.