ರಾಮಸಾಗರ ಬಳಿಯ ರಾಜಶೇಖರಗೌಡರ ಗದ್ದೆಯಲ್ಲಿ ಕಂಡು ಬಂದ ಮೊಸಳೆ ಮರಿ. 
ಜಿಲ್ಲೆ

ಸುರಕ್ಷಿತವಾಗಿ ನದಿ ಸೇರಿದ ಮೊಸಳೆ ಮರಿ

ಕಂಪ್ಲಿ: ರಾಮಸಾಗರ ಗ್ರಾಮದ ತುಂಗಭದ್ರಾ ನದಿ ನಂದಿ ಕಟ್ಟೆ ಈರಣ್ಣ ಬಳಿಯ ಎಚ್.ಟಿ.ರಾಜಶೇಖರಗೌಡ ಅವರ ಗದ್ದೆಯಲ್ಲಿ ಶನಿವಾರ ಮೊಸಳೆ ಮರಿ ಕಾಣಿಸಿಕೊಂಡಿದೆ. ಕೆಲ ದಿನಗಳ ಹಿಂದೆ ತುಂಗಭದ್ರಾ ನದಿಗೆ ಜಲಾಶಯದ ಹೆಚ್ಚುವರಿ ನೀರು ಹರಿಸಲಾಗಿತ್ತು. ನೀರಿನೊಂದಿಗೆ ಬಂದ ಮೊಸಳೆ ಮರಿ ಗದ್ದೆಗೆ ಸೇರಿಕೊಂಡಿದೆ. ಗದ್ದೆಯಲ್ಲಿ ಕೃಷಿ ಚಟುವಟಿಕೆಗೆ ಬಂದಾಗ ಮೊಸಳೆ ಮರಿ ಕಂಡಿದ್ದು, ಸುರಕ್ಷಿತವಾಗಿ ತುಂಗಭದ್ರಾ ನದಿಗೆ ಬಿಡಲಾಗಿದೆ ಎಂದು ಎಚ್.ಟಿ.ರಾಜಶೇಖರ ಗೌಡ ತಿಳಿಸಿದ್ದಾರೆ.