ಅಳವಂಡಿ: ಸಂಗೀತ ಆಲಿಸುವುದರಿಂದ ಮನಸ್ಸು ಉಲ್ಲಾಸದಿಂದ ಇರಲಿದೆ. ಚಿಂತೆಯಲ್ಲಿರುವ ಮನ ಕೆಲಕಾಲ ಸಂಗೀತ ಹಾಗೂ ಇತರ ಸಾಂಸ್ಕೃತಿಕ ಕಾರ್ಯಮ್ರಮದಲ್ಲಿ ಪಾಲ್ಗೊಳ್ಳುದರಿಂದ ಉತ್ಸಾಹದಿಂದ ಇರಲಿದೆ ಎಂದು ಹಡಗಲಿಯ ಶ್ರೀಹಿರೇಶಾಂತವೀರ ಸ್ವಾಮಿಗಳು ತಿಳಿಸಿದರು.
ಇದನ್ನೂ ಓದಿ: ಬೇಂದ್ರೆಯವರ ಸಂಗೀತ ಪ್ರಯೋಗಿಸಿ, ಜನಪ್ರಿಯಗೊಳಿಸಿ
ಸಮೀಪದ ಘಟ್ಟಿರಡ್ಡಿಹಾಳದಲ್ಲಿ ಶ್ರೀಮಾರುತೇಶ್ವರ ಭಜನಾ ಸಂಘದವರು ಶ್ರೀಪುಟ್ಟರಾಜ ಗವಾಯಿಗಳ ಪುಣ್ಯಾರಾಧನೆ ಅಂಗವಾಗಿ ಕೊಪ್ಪಳ ಗವಿಮಠದ ಶ್ರೀಗವಿಸಿದ್ದೇಶ್ವರ ಸ್ವರ ಸಂಚಾರ ತಂಡದ ಸಂಗೀತ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಮೊಬೈಲ್ ಬಂದ ನಂತರ ಯುವಕರು, ಮಕ್ಕಳು ಸಂಗೀತ, ಜಾನಪದ ಮುಂತಾದ ಕಾರ್ಯಕ್ರಮಗಳಿಂದ ವಿಮುಖರಾಗುತ್ತಿದ್ದಾರೆ. ಮೊಬೈಲ್‌ನಲ್ಲಿ ಬಹುಪಾಲು ಜೀವನವನ್ನು ಅನಾವಶ್ಯಕವಾಗಿ ಕಳೆದು ಅತ್ಯಮೂಲ್ಯ ಸಮಯ ವ್ಯರ್ಥ ಮಾಡುತ್ತಿದ್ದಾರೆ.
ಅತಿಯಾದ ಮೊಬೈಲ್ ಬಳಕೆ ಸದ್ಯಕ್ಕೆ ಮಾತ್ರ ತೃಪ್ತಿ ನೀಡುತ್ತಿದ್ದು, ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸಂಗೀತ ಕಲಾವಿದರಾದ ಚೇತನರಡ್ಡಿ, ವೀರೇಶ ಹಿಟ್ನಾಳ, ರಿಜ್ವಾನ್ ಮುದ್ದಾಬಳ್ಳಿ, ಶಕುಂತಲಾ ಇದ್ದರು.