ನೆಲಮಂಗಲ: ಗುರಿಸಾಧನೆಗೆ ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ನಿವೃತ್ತ ಮುಖ್ಯಶಿಕ್ಷಕಿ ಸರ್ವಮಂಗಳಾ ಅಭಿಪ್ರಾಯಪಟ್ಟರು.
ತಾಲೂಕಿನ ಅರಿಶಿನಕುಂಟೆ ನಂದರಾಮಯ್ಯಪಾಳ್ಯದ ಬ್ಲೂ ಮೂನ್ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾವಿತ್ರಬಾಯಿ ುಲೆ ಅವರ 189ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು. ಸಾವಿತ್ರಿಬಾಯಿ ುಲೆ ಅವರನ್ನು ಸಮಾಜ ಸುಧಾರಕರೆಂದು ಕರೆದರೆ ತಪ್ಪಾಗಲಾರದು. ಪತಿಯಿಂದಲೇ ಶಿಕ್ಷಣ ಕಲಿತು, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಮನೆಯಲ್ಲಿಯೇ ಶಾಲೆಯನ್ನು ತೆರದವರು ಎಂದರು.
ಸತ್ಯಶೋಧಕ ಸಮಾಜ ಸ್ಥಾಪನೆ ಮಾಡಿದ ಸಾವಿತ್ರಿಬಾಯಿ ುಲೆ ಅವರು ಅಂದಿನ ಸಮಾಜದಲ್ಲಿ ಅಜ್ಞಾನ, ಅಂಧಕಾರದ ವಿರುದ್ಧ ಧ್ವನಿ ಎತ್ತಿದವರು. ಸ್ತ್ರೀಕುಲಕ್ಕೆ ಕಂಟಕವಾಗಿದ್ದ ಬಾಲ್ಯವಿವಾಹ, ಸತಿಸಹಗಮನದಂತ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಟ ಮಾಡಿದವರು. ಇಂತಹ ಶ್ರೇಷ್ಠ ಮಹಿಳಾ ಶಿಕ್ಷಕಿಯ ಆದರ್ಶ ಅನುಸರಣೆ ಮಾಡಬೇಕಿದೆ. ಸಾವಿತ್ರಿಬಾಯಿ ುಲೆ ಅವರ ಜಯಂತಿ ಆಚರಣೆ ಮಾಡುವಂತೆ ಸರ್ಕಾರ ಆದೇಶ ನೀಡಿರುವುದು ಸ್ವಾಗತಾರ್ಹ ಎಂದರು.
ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋಗುವುದೇ ಅಪರಾಧವೆಂದು ಭಾವಿಸುತ್ತಿದ್ದ ಕಾಲದಲ್ಲಿ ಶಿಕ್ಷಣದ ಮಹತ್ವವನ್ನು ಅರಿತ ಸಾವಿತ್ರಿಬಾಯಿ ಅವರು ಶಿಕ್ಷಣ ಪಡೆಯಲು ಮುಂದಾದವರು. ತಾನು ಕಲಿತ ವಿದ್ಯೆಯನ್ನು ಸಮಾಜಕ್ಕೂ ನೀಡುವ ಉದ್ದೇಶಿದಿಂದ ಶಿಕ್ಷಕ ವೃತ್ತಿಯ ಆಯ್ಕೆ ಮಾಡಿಕೊಂಡ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ುಲೆ ಅವರ ಸೇವೆ ಅನನ್ಯ ಎಂದು ಶಾಲಾ ಕಾರ್ಯದರ್ಶಿ ಚಂದ್ರಶೇಖರ್ ತಿಳಿಸಿದರು.
ನಿವೃತ್ತ ಮುಖ್ಯಶಿಕ್ಷಕಿ ಸರ್ವಮಂಗಳಮ್ಮ ಅವರನ್ನು ಸನ್ಮಾನಿಸಲಾಯಿತು. ಸಾವಿತ್ರಿಬಾಯಿ ುಲೆ ಜೀವನ ಚರಿತ್ರೆಯ ಕುರಿತಾದ ಕಿರುಚಿತ್ರ ಪ್ರದರ್ಶಿಸಲಾಯಿತು. ಪ್ರಭಾರ ಮುಖ್ಯಶಿಕ್ಷಕಿ ರತ್ನಮ್ಮ, ಸಹಶಿಕ್ಷಕಿ ಕೋಕಿಲಾ, ರಮ್ಯಾ, ಪವಿತ್ರ, ರೂಪ, ವಸಂತ, ನ್ಯೂ ಪಬ್ಲಿಕ್ ಶಾಲೆ ಸಹಶಿಕ್ಷಕಿ ಜ್ಯೋತಿ, ಮತ್ತಿತರರು ಉಪಸ್ಥಿತರಿದ್ದರು.