ಎಸ್‌ಸಿಡಿಸಿಸಿ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ವಿಶ್ವಕರ್ಮ ಬ್ಯಾಂಕ್‌ಗೆ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿದರು. ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಎಸ್.ಆರ್.ಹರೀಶ್ ಆಚಾರ್ಯ, ಉಪಾಧ್ಯಕ್ಷ ಡಿ.ಭಾಸ್ಕರ ಆಚಾರ್ಯ, ನಿರ್ದೇಶಕರಾದ ಎಸ್.ಜಯಶ್ರೀ ವಿ.ಆಚಾರ್ಯ, ಹರಿಪ್ರಸಾದ್ ಮತ್ತು ಭರತ್ ಲೋಕೇಶ್ ಆಚಾರ್, ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಪುಂಜಾಲ್‌ಕಟ್ಟೆ ಉಪಸ್ಥಿತರಿದ್ದರು.  
ಜಿಲ್ಲೆ

ವಿಶ್ವಕರ್ಮ ಸಹಕಾರ ಬ್ಯಾಂಕ್‌ಗೆ ಸಾಧನಾ ಪ್ರಶಸ್ತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪಟ್ಟಣ ಸಹಕಾರ ಬ್ಯಾಂಕುಗಳ ಕ್ಷೇತ್ರದ ಉತ್ತಮ ಬ್ಯಾಂಕ್‌ಗಳಿಗೆ ನೀಡುವ 2022-23ನೇ ಸಾಲಿನ ಸಾಧನಾ ಪ್ರಶಸ್ತಿ ವಿಶ್ವಕರ್ಮ ಸಹಕಾರ ಬ್ಯಾಂಕ್‌ಗೆ ಲಭಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ (ಎಸ್‌ಸಿಡಿಸಿಸಿ) ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಇತ್ತೀಚೆಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಎಸ್.ಆರ್.ಹರೀಶ್ ಆಚಾರ್ಯ, ಉಪಾಧ್ಯಕ್ಷ ಡಿ.ಭಾಸ್ಕರ ಆಚಾರ್ಯ, ನಿರ್ದೇಶಕರಾದ ಎಸ್.ಜಯಶ್ರೀ ವಿ.ಆಚಾರ್ಯ, ಹರಿಪ್ರಸಾದ್ ಮತ್ತು ಭರತ್ ಲೋಕೇಶ್ ಆಚಾರ್, ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಪುಂಜಾಲ್‌ಕಟ್ಟೆ ಉಪಸ್ಥಿತರಿದ್ದರು.