ನಿಪ್ಪಾಣಿ: ನಾಸಾದ ಇಂಟರ್ ನ್ಯಾಶನಲ್ ಸ್ಪೇಸ್ ಆಫ್ ಚಾಲೆಂಜ್‌ನಲ್ಲಿ ಕೆಎಲ್‌ಇ ಸಂಸ್ಥೆಯ ಆಂಗ್ಲ ಮಾಧ್ಯಮ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿನಿ ಸ್ವರಾ ತಾರಾಳೆ ಸಾದರಪಡಿಸಿದ ‘ಜಿಯೋ ಮ್ಯಾಗ್ನೆಟಿಕ್ ಸೌರ ಜ್ವಾಲೆಗಳು’ ಯೋಜನೆ ದ್ವಿತೀಯ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಸಂಸ್ಥೆಯ ಸಂಚಾಲಕ ಪ್ರವೀಣ (ಅಮರ) ಬಾಗೇವಾಡಿ ಶುಕ್ರವಾರ ಸತ್ಕರಿಸಿದರು.
ಕೆಎಲ್‌ಇ ಸಂಚಾಲಕ ಪ್ರವೀಣ (ಅಮರ) ಬಾಗೇವಾಡಿ ಮಾತನಾಡಿ, ತಾಂತ್ರಿಕ ಕೌಶಲ, ಸೃಜನಶೀಲತೆ, ಶಿಕ್ಷಕರ ಮಾರ್ಗದರ್ಶನ ಹಾಗೂ ಕಠಿಣ ಪರಿಶ್ರಮದ ಫಲವಾಗಿ ವಿದ್ಯಾರ್ಥಿನಿ ಸ್ವರಾ ಸಾಧನೆಗೈಯಲು ಸಾಧ್ಯವಾಗಿದೆ. ಸ್ವರಾ ಸಾಧನೆಯಿಂದ ನಮ್ಮ ಸಂಸ್ಥೆಯ ಕಿರೀಟದಲ್ಲಿ ಮತ್ತೊಂದು ಗರಿ ಸೇರಿಕೊಂಡಿದೆ ಎಂದರು. ಸೀಮಾ ಬಾಗೇವಾಡಿ, ಶಾಲೆಯ ಪ್ರಾಚಾರ್ಯೆ ಆಶಾ ಮಾರ್ಟಿನ್, ಗಜೇಂದ್ರ ತಾರಳೆ ಇದ್ದರು. 18-30