ಜಿಲ್ಲೆ

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಹಾಗೂ ಕಾಂತರಾಜ ಆಯೋಗದ ವರದಿಗಳನ್ನು ಮಂಡಿಸಿ ಜಾರಿಗೊಳಿಸಲು ಆಗ್ರಹಿಸಿ ದಲಿತ ಸಂರ್ಷ ಸಮಿತಿ ವತಿಯಿಂದ ನಗರದ ಟಿಪ್ಪು ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್​ ರ್ಯಾಲಿ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೇ ಮಾತನಾಡಿದ ಜಿಲ್ಲಾ ಟಕದ ಅಧ್ಯ ಡಿ. ಜಿ. ಕಟ್ಟಿಮನಿ, ಪರಿಶಿಷ್ಟ ಜಾತಿ ಉದ್ಯೋಗ ಮತ್ತು ಶಿಣದಲ್ಲಿ ಕಲ್ಪಿಸಿರುವ ಶೇ. 15 ರಷ್ಟು ಮೀಸಲಾತಿಯು ಪರಿಶಿಷ್ಟರ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಸಮಾನವಾಗಿ ಹಂಚಿಕೆಯಾಗಿಲ್ಲ. ಈ ತಾರತಮ್ಯ ನಿವಾರಣೆಗಾಗಿ ಕಳೆದ 30 ವರ್ಷಗಳಿಂದ ರಾಜ್ಯದಲ್ಲಿ ನಿರಂತರ ಹೋರಾಟ ನಡೆಸುತ್ತಿದ್ದೇವೆ. ಈ ಪ್ರತಿಭಟನೆಗೆ ಮಣಿದು ರಾಜ್ಯ ಸರ್ಕಾರ 2005 ರಲ್ಲಿ ಎ.ಜೆ. ಸದಾಶಿವ ಆಯೋಗ ನೇಮಕ ಮಾಡಿತು. ಈಗ 18 ವರ್ಷಗಳು ಆಗಿವೆ. ಆಯೋಗ ಸರ್ಕಾರಕ್ಕೆ ವರದಿ ನೀಡಿ 11 ವರ್ಷಗಳು ಆಗಿವೆ. ಪರಿಶಿಷ್ಟ ಮೀಸಲಾತಿ ವರ್ಗೀಕರಣ ಮಾಡಿ ಪರಿಶಿಷ್ಟ ಸಮುದಾಯಕ್ಕೆ ನ್ಯಾಯ ಕಲ್ಪಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಮದು ಆಗ್ರಹಿಸಿದರು.
ಮಹಿಳಾ ಟಕದ ಅಧ್ಯೆ ಮಂಜುಳಾ ಕಲಕೇರಿ ಮಾತನಾಡಿ ಶೋಷಣೆಗೆ ಒಳಗಾದ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿ, ಸಮಗಾರ, ಮಾತಂಗ, ಡೋಹರ, ಮೋಚ, ಮಾದರಿ ಮುಂತಾದ ಜಾತಿಗಳಿಗೆ ಮೀಸಲಾತಿ ಸೌಲಭ್ಯ ದೊರಕಿಲ್ಲ. ತೀರಾ ನಿಕೃಷ್ಠ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಆದರೆ ಪರಿಶಿಷ್ಟ ಜಾತಿಗಳಿಂದ ಮತ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಉಪಾಧ್ಯ ಉಮೇಶ ಪೂಜಾರ ಮಾತನಾಡಿದರು. ಬಸವರಾಜ ಮುಳ್ಳಾಳ, ಯಮನಪ್ಪ ಮಾದರ, ಯಲ್ಲಪ್ಪ ಮಾದರ, ಯಮನೂರ ಅಬ್ಬಿಗೇರಿ, ಶರಣಪ್ಪ ಕರಮುಡಿ, ಶಿವು ಬೆಳವಣಿಕಿ, ಜಗದೀಶ ಮಲ್ಲಣ್ಣವರ, ಮಾರುತಿ ಬೇವಿನಕಟ್ಟಿ ಇತರರು ಇದ್ದರು.