filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (0.86319447, 0.86319447); modeInfo: ; sceneMode: Auto; cct_value: 0; AI_Scene: (200, -1); aec_lux: 0.0; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಸದಲಗಾ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

ಪ್ರಶಾಂತ ಹೂಗಾರ

ಬೋರಗಾಂವ: ಸಮೀಪದ ಸದಲಗಾ ಪುರಸಭೆಯ 7 ತಿಂಗಳು ಅವಧಿಗೆ ಸೋಮವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಬಸವರಾಜ ಗುಂಡಕಲ್ಲೆ, ಉಪಾಧ್ಯಕ್ಷೆಯಾಗಿ ವಿಜಯಲಕ್ಷ್ಮೀ ನವಲೆ ಅವಿರೋಧ ಆಯ್ಕೆಯಾಗಿದ್ದಾರೆ.

23 ಸದಸ್ಯ ಬಲದ ಸದಲಗಾ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಯ ಮಹಿಳಾ ಅಭ್ಯರ್ಥಿಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಹೇಮಂತ ಸಿಂಗೆ ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ನಾಮಪತ್ರ ಹಿಂಪಡೆದರು. ಹೀಗಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಯಿತು.

ಕಾಂಗ್ರೆಸ್ ಕಾರ್ಯಕರ್ತರು ಗುಲಾಲ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕ ಗಣೇಶ ಹುಕ್ಕೇರಿ ಅಭಿನಂದಿಸಿದರು.

ಚುನಾವಣಾಧಿಕಾರಿಯಾಗಿ ಚಿದಂಬರ ಕುಲಕರ್ಣಿ ಕಾರ್ಯನಿರ್ವಹಿಸಿದರು.

ಪುರಸಭೆ ಸದಸ್ಯರಾದ ಸತೀಶ ಪಾಟೀಲ, ಭೀಮರಾವ ಮಾಳಗೆ, ರವಿ ಗೋಸಾವಿ, ಅತ್ತಾವುಲ್ಲಾ ಮುಜಾವರ, ಜಯಶ್ರೀ ಅನುರೆ, ಅರುಣ ದೇಸಾಯಿ, ಸುಹಾಸ ವಾಳಕೆ, ಸುಗಂಧ ವಾಳಕೆ, ವಿಜಯ ದೇಸಾಯಿ, ಲಕ್ಷ್ಮೀ ನಿಡಗುಂಡೆ, ಮಾಲುತಾಯಿ ಭೆಂಡವಾಡೆ, ಪ್ರಕಾಶ ಆನೂರೆ, ರಂಜಿತ್ ಪಾಟೀಲ, ಉದಯ ಬದನಿಕಾಯಿ, ರಿಯಾನ ಸನದಿ, ವಿಜಯ ದೇಸಾಯಿ, ಸಂತೋಷ ನವಲೆ, ಉಪ ತಹಸೀಲ್ದಾರ್ ಪಿ.ಬಿ. ಶಿರಿವಂತ, ಕಂದಾಯ ನಿರೀಕ್ಷಕ ಎಂ.ಎ. ನಾಗರಾಳೆ, ಮುಖ್ಯಾಧಿಕಾರಿ ಶಿವಾನಂದ ಭೋಸಲೆ ಇತರರಿದ್ದರು.