ಜಿಲ್ಲೆ

ಸಾಧಕಿಯರ ಸಂಗಮ

ಪಂಕಜ ಕೆ.ಎಂ.

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ಲೆಕ್ಕಾಧಿಕಾರಿಗಳ ಸಂಘ ಶನಿವಾರ (ಜೂ.8) ಬೆಳಗ್ಗೆ 10.30ಕ್ಕೆ ‘ಸಾಧಕಿಯರ ಸಂಗಮ’ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ನಗರದ ಆನಂದರಾವ್ ವೃತ್ತದ ಬಳಿಯ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಹಿಳಾ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ದೀಪಾ ಅಜಯ್ ಅವರಿಗೆ ‘ನಾಗರಿಕ ಸನ್ಮಾನ’ ಮಾಡಲಾಗುವುದು.

ಲೇಖಕಿ ನೇಮಿಚಂದ್ರ ಅವರು ‘ಮಾತೃತ್ವದ ಸಾರ್ಥಕತೆಯ ವಿವಿಧ ಮುಖಗಳು’ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಾಹಿತಿ ಮತ್ತು ನೃತ್ಯಗಾರ್ತಿ ಡಾ. ಕೆ.ಎಸ್. ಪವಿತ್ರಾ ‘ನೃತ್ಯ ಮೂಲಕ ಸಾಹಿತ್ಯ ಮತ್ತು ಲಲಿತಕಲೆಗಳ ಅಭಿವ್ಯಕ್ತಿ’ ಕುರಿತು ಪ್ರಾತ್ಯಕ್ಷಿಕೆ ನೀಡಲಿದ್ದಾರೆ ಎಂದ ಕಾರ್ಯಕ್ರಮದ ಆಯೋಜಕರಾದ ವಿಶ್ವೇಶ್ವರ ಗಾಯತ್ರಿ ತಿಳಿಸಿದ್ದಾರೆ.