ಜಿಲ್ಲೆ

ಸಡಗರದ ರುದ್ರಸ್ವಾಮಿ ರಥೋತ್ಸವ

ಎಂ.ಎಸ್​.ಹಿರೇಮಠ ಬೆಳಗಾವಿ

ಇಟಗಿ: ಸಮೀಪದ ಬಿಳಕಿ&ಅವರೊಳ್ಳಿ ಗ್ರಾಮದಲ್ಲಿ ಶ್ರೀ ರುದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವ ಈಚೆಗೆ ಸಂಭ್ರಮದಿಂದ ಜುರುಗಿತು. ಶ್ರೀ ಮಠದ ಪೀಠಾಧ್ಯ ಚನ್ನಬಸವ ದೇವರು ರಥೋತ್ಸವಕ್ಕೆ ಚಾಲನೆ ನೀಡಿದರು. ಬೆಳಗ್ಗೆ ಧರ್ಮ ಧ್ವಜಾರೋಹಣ, ಪಲ್ಲಕ್ಕಿ ಉತ್ಸವ, ವಿಶೇಷ ಮಹಾ ಪೂಜೆ ಮತ್ತು ಪ್ರಸಾದ ನೆರವೇರಿತು. ಬೆಳಗಾವಿ, ಧಾರವಾಡ, ಕಾರವಾರ ಸೇರಿ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಭಕ್ತಿಸೇವೆ ಸಮರ್ಪಿಸಿ ಗುರುಕೃಪೆಗೆ ಪಾತ್ರರಾದರು.