ಕೊಂಡ್ಲಹಳ್ಳಿ: ಇಲ್ಲಿನ ಸಾಲೇಶ್ವರ ಸಮುದಾಯ ಭವನದಲ್ಲಿ ಗೃಹಲಕ್ಷ್ಮೀ ಉದ್ಘಾಟನಾ ಕಾರ್ಯಕ್ರಮವವನ್ನು ವಿಶೇಷವಾಗಿ ಆಚರಿಸಲಾಯಿತು. ಬಾಳೆ, ಮಾವು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು ತಮ್ಮ ಮನೆ ಅಂಗಳವನ್ನು ಬಣ್ಣ-ಬಣ್ಣದ ರಂಗೋಲಿಗಳಿಂದ ಅಲಂಕರಿಸಿದ್ದರು. ಗೃಹಲಕ್ಷ್ಮೀ ಸಾಲುಗಳನ್ನು ಬರೆದು, ಪೂಜೆ ಸಲ್ಲಿಸಿದರು.
ಗ್ರಾಪಂ ಅಧ್ಯಕ್ಷೆ ಎಂ.ಎಲ್.ಪವಿತ್ರಾ ಜ್ಯೋತಿ ಬೆಳಗಿಸಿ ಯೋಜನೆಗೆ ಚಾಲನೆ ನೀಡಿದರು. ಎನ್‌ಆರ್‌ಎಲ್‌ಎಂ ಒಕ್ಕೂಟದ ಅಧ್ಯಕ್ಷೆ ಟಿ.ಶೋಭಾ, ಗ್ರಾಪಂ ಸದಸ್ಯರಾದ ವಿ.ಪಾಲಾಕ್ಷ, ಬಿ.ಟಿ.ಹನುಮರೆಡ್ಡಿ, ಎನ್.ನಿಂಗರಾಜ್, ಪಿ.ಕರೇಗೌಡ್ರು, ರಾಧಮ್ಮ, ಗಂಗಮ್ಮ, ಎನ್.ಎನ್.ಪವಿತ್ರಮ್ಮ, ಪಿ.ಮಮತಾ, ಲಕ್ಷ್ಮೀ, ರತ್ನಮ್ಮ, ಮಲ್ಲಿಕಮ್ಮ, ಎಚ್.ಸಿ.ಪ್ರದೀಪ್, ಜಿ.ಪ್ರಕಾಶ್, ಕವಿತಾ, ಬಿ.ಟಿ.ಮೋಹನ್ ಇದ್ದರು.