ಚಿತ್ರದುರ್ಗ: ನಗರದ ಹೊರವಲಯ ಸೀಬಾರ-ಗುತ್ತಿನಾಡಿನ ವಿಶ್ವಮಾನವ ಸಾಂಸ್ಕತಿಕ ಮತ್ತು ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಸ್ವಾತಂತ್ರ್ಯ ದಿನವನ್ನು ಸಡಗರ ಸಂಭ್ರಮದೊಂದಿಗೆ ಆಚರಿಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಟಿ.ಎಚ್.ಬುಡೇನ್‌ಸಾಬ್, ದೇಶಕ್ಕೆ ದೊರೆತಿರುವ ಸ್ವಾತಂತ್ರೃದ ಹಿಂದೆ ಅನೇಕ ಮಹನೀಯರ ತ್ಯಾಗ, ಬಲಿದಾನ ಹಾಗೂ ಹೋರಾಟವಿದೆ ಎಂಬುದನ್ನು ಮರೆಯಬಾರದು. ಅವರನ್ನು ಸ್ಮರಿಸುವ ಕರ್ತವ್ಯ ನಮ್ಮದಾಗಿದ್ದು, ಅವರ ಆಶಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಂಸ್ಥೆ ಕಾರ‌್ಯದರ್ಶಿ ಎಂ.ನೀಲಕಂಠದೇವರು, ಸದಸ್ಯರಾದ ಮೌಲಾನ್‌ಸಾಬ್, ಪ್ರಾಚಾರ‌್ಯೆ ಎಚ್.ಆರ್.ಸುಧಾ, ಮುಖ್ಯಶಿಕ್ಷಕ ಜಿ.ಆರ್.ಚನ್ನಬಸಪ್ಪ, ಬಿ.ಜಿ.ಶಿವರುದ್ರಯ್ಯ, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.
ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ನೃತ್ಯ, ಭಾಷಣ, ಪಿರಮಿಡ್ ರಚನೆ, ವೇಷಭೂಷಣಹಾಗೂ ಸಾಂಸ್ಕೃತಿಕ ಕಾರ‌್ಯಕ್ರಮಗಳು ಮೆಚ್ಚುಗೆಗೆ ಪಾತ್ರವಾದವು.