ಪಡುಬಿದ್ರಿ: ಬೊಲ್ಯೊಟ್ಟು ಆಲಡೆಯಲ್ಲಿ ಜೀರ್ಣೋದ್ಧಾರ ಪೂರ್ವಕ ಮುಷ್ಟಿ ಕಾಣಿಕೆ ಸಮರ್ಪಣೆ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಭಾನುವಾರ ನೆರವೇರಿತು. ಆದಿಸ್ಥಳಕ್ಕೆ ಸೇರಿದವರು, ಊರವರು ಹಾಗೂ ಭಕ್ತರು ಮುಷ್ಟಿಯಲ್ಲಿ ಹುಂಡಿಗೆ ಮುಷ್ಟಿ ಕಾಣಿಕೆ ಸಮರ್ಪಿಸಿದರು.
ಬೆಳಗ್ಗೆ ಪ್ರಾರ್ಥನೆ, ಆಶ್ಲೇಷಾ ಬಲಿ, ನವಗ್ರಹ ಹೋಮ, ಗೋ ಸೂಕ್ತ ಹೋಮ, ನಾಗದೇವರಿಗೆ ಪೂಜೆ ಮೊದಲಾದ ವಿಧಿವಿಧಾನಗಳು ಹಾಗೂ ಸಂಜೆ ದುರ್ಗಾ ನಮಸ್ಕಾರ ಪೂಜೆ ಸಂಪನ್ನಗೊಂಡಿತು. ತಂತ್ರಿಗಳಾದ ಸಜೆ ಹರೀಶ್ ಜೋಯಿಸ, ಪ್ರಧಾನ ಅರ್ಚಕ ಬೊಲ್ಯೊಟ್ಟು ಗಣೇಶ ಭಟ್ಟ, ಆಡಳಿತ ಮೋಕ್ತೆಸರ ಯುವರಾಜ ಶೆಟ್ಟಿ ಎಲ್ಲೂರು ಗುತ್ತು, ಗೌರವಾಧ್ಯಕ್ಷ ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸುಂದರ ಶೆಟ್ಟಿ ಬೆಳ್ಳಿಬೆಟ್ಟುಗುತ್ತು ಬೆಳಪು, ಉದಯ ಶೆಟ್ಟಿ ಅವರಾಲು ದಾರೋಡ್ ಗುತ್ತು, ಸೀತಾರಾಮ ಶೆಟ್ಟಿ ಅವರಾಲು ಬೋಳಿಂಜೆ ಗುತ್ತು, ಸೀತಾರಾಮ ಶೆಟ್ಟಿ, ಸಮಿತಿ ಪದಾಧಿಕಾರಿಗಳು, ಸದಸ್ಯರು, ಊರವರು ಪಾಲ್ಗೊಂಡಿದ್ದರು.